PUBG ಗೇಮ್ ನಲ್ಲಿ ಆರಂಭವಾದ ಲವ್... ಇನಿಯನಿಗಾಗಿ 700 ಕಿ.ಮೀಟರ್ ಬಂದ ಸಹೋದರಿಯರು..
Wednesday, August 11, 2021
ಶಿಮ್ಲಾ(ಉತ್ತರಾಖಂಡ): ಹಿಮಾಚಲ ಪ್ರದೇಶದ ಕಾಂಗ್ರಾದಿಂದ ಇಬ್ಬರು ಸಹೋದರಿಯರು ಪಬ್ಜೀ ಸ್ನೇಹಿತನೊಂದಿಗೆ ಲವ್ನಲ್ಲಿ ಬಿದ್ದು, ಆತನೊಂದಿಗೆ ಮದುವೆ ಮಾಡಿಕೊಳ್ಳಲು ಸುಮಾರು 700 ಕಿ.ಮೀಟರ್ ಬಂದು. ಆತನನ್ನು ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಈ ಘಟನೆ ಉತ್ತರಾಖಂಡದ ಚಮೋಲಿಯಲ್ಲಿ ನಡೆದಿದೆ. ಸಹೋದರಿಯರು ಪಬ್ಜೀ ಆಡುವಾಗ ಉತ್ತರಾಖಂಡ್ದ ಯುವಕನ ನಡುವೆ ಪ್ರೇಮಾಂಕುರವಾಗಿದೆ. ಈ ವೇಳೆ, ಆತನೊಂದಿಗೆ ಸಪ್ತಪದಿ ತುಳಿಯಲು ನಿರ್ಧಾರ ಮಾಡಿ, ಅಲ್ಲಿಂದ ಬಂದಿದ್ದಾರೆ. ಆದರೆ ಹುಡುಗ ಅಪ್ರಾಪ್ತ ಎಂಬುದು ಗೊತ್ತತಾಗಿದೆ.
ಸಹೋದರಿಯರಿಬ್ಬರು ನಾಪತ್ತೆ ಆಗಿರುವ ಬಗ್ಗೆ ಪೋಷಕರು ಕಾಂಗ್ರಾ ಜಿಲ್ಲೆಯ ಬೈಜನಾಥ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ವೇಳೆ, ಹುಡುಗಿಯರ ಮೊಬೈಲ್ ಟ್ರ್ಯಾಕ್ ಮಾಡಿದಾಗ ಉತ್ತರಾಖಂಡದಲ್ಲಿರುವುದು ಗೊತ್ತಾಗಿದೆ. ಅಲ್ಲಿನ ಪೊಲೀಸರ ಸಹಾಯದಿಂದ ಇವರ ರಕ್ಷಣೆ ಮಾಡಲಾಗಿದ್ದು, ಮರಳಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.