
ಹುಡುಗಿಯನ್ನು ಇಂಪ್ರೆಸ್ ಮಾಡಲು ತಾಯಿಯ ಚಿತಾಬಸ್ಮ ತಂದ ಯುವಕ..! ಮುಂದಾಗಿದ್ದು ಮಾತ್ರ..
Tuesday, August 10, 2021
ನ್ಯೂಯಾರ್ಕ್: ಡೇಟಿಂಗ್ ವೇಳೆ ಗೆಳತಿಯನ್ನು ಇಂಪ್ರೆಸ್ ಮಾಡಲೆಂದು ಇಲ್ಲೊಬ್ಬ ಚಿತಾಬಸ್ಮ ತಂದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಡೇಟಿಂಗ್ ಆ್ಯಪ್ನಲ್ಲಿ ಇವರಿಬ್ಬರ ಪರಿಚಯವಾಗಿದೆ. ಆಕೆಯನ್ನು ಮೊದಲು ಮೀಟ್ ಮಾಡಲು ಹೋದಾಗ
ಆತ ಯುವತಿಗೆ ನಿನಗೇನು ಇಷ್ಟ ಎಂದು ಕೇಳಿದ್ದಾನೆ ಅದಕ್ಕೆ ಆಕೆ ಸದಾ ನೆನಪಿನಲ್ಲಿ ಇರುವ ಹಾಗೆ ಏನಾದ್ರೂ ನೀಡು ಎಂದಿದ್ದಾಳೆ.
ಅದಕ್ಕೆ ಆತ ಒಂದು ಚೊಂಬಿನಲ್ಲಿ ತನ್ನ ತಾಯಿಯ ಚಿತಾಭಸ್ಮವನ್ನು ತೆಗೆದುಕೊಂಡು ಹೋಗಿದ್ದಾನೆ.ನಂತರ ನನ್ನ ತಾಯಿಯನ್ನು ಇಲ್ಲಿಯೇ ಪರಿಚಯಿಸುವೆ ಡಿಫರೆಂಟ್ ಆಗಿ ಎಂದಿದ್ದಾನೆ. ಯುವತಿಗೆ ತೀರಾ ಅಚ್ಚರಿಯಾಗಿದೆ. ತಾಯಿ ಎಲ್ಲಿದ್ದಾಳೆ ಎಂದು ಕೇಳಿದ್ದಾಳೆ. ಕೂಡಲೇ ಯುವಕ ಚೊಂಬಿನಲ್ಲಿದ್ದ ಚಿತಾಭಸ್ಮವನ್ನು ತೆರೆದು ತೋರಿಸಿದ್ದಾರೆ. ಇದನ್ನು ನೋಡಿದ ಯುವತಿ ಹೌಹಾರಿದ್ದಾಳೆ.
ನಾವೆಲ್ಲಾ ನಮ್ಮ ನಮ್ಮ ನೋವುಗಳನ್ನು ಬೇರೆ ಬೇರೆ ರೀತಿಗಳಲ್ಲಿ ನಿಭಾಯಿಸುತ್ತೇವೆ, ನಾನು ಅದನ್ನು ಗೌರವಿಸುತ್ತೇನೆ. ಆದರೆ ಇದು ತೀರಾ ವಿಚಿತ್ರ ಹಾಗೂ ಅಸಭ್ಯವಾದದ್ದು ಎಂದಿರುವ ಯುವತಿ ಅಲ್ಲಿಂದಲೇ ಯುವಕನ ಪ್ರೀತಿಯನ್ನು ತಿರಸ್ಕರಿಸಿ ಎದ್ದು ನಡೆದಿದ್ದಾಳೆ. ಸಾಲದು ಎಂಬುದನ್ನು ಆತನಿಗೆ ಛೀಮಾರಿ ಹಾಕಿ ಹೋಗಿದ್ದಾಳೆ. ನಿನಗೊಂದು ದೊಡ್ಡ ನಮಸ್ಕಾರ ಎಂದು ಗುಡ್ಬೈ ಹೇಳಿದ್ದಾಳೆ.