11 ನಿಮಿಷ ಮಾತ್ರ ರೇಪ್ ನಡೆಸಿದ್ದು ಎಂದು ಶಿಕ್ಷೆ ಕಡಿಮೆಗೊಳಿಸಿದ ಕೋರ್ಟ್...
Tuesday, August 10, 2021
ಬಾಸೆಲ್ (ಸ್ವಿಜರ್ಲ್ಯಾಂಡ್): 11 ನಿಮಿಷ ಮಾತ್ರ ಅತ್ಯಾಚಾರ ನಡೆಸಿದ್ದ ಎನ್ನುವ ಕಾರಣಕ್ಕೆ ಕೋರ್ಟ್ ಆತನ ಶಿಕ್ಷೆಯನ್ನು ಕಡಿಮೆ ಮಾಡಿರುವ ಘಟನೆ ನಡೆದಿದ್ದು, ಇದೀಗ ಈ ಬಗ್ಗೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷ 17 ವರ್ಷದ ಬಾಲಕಿಯ ಮೇಲೆ ನೈಟ್ ಕ್ಲಬ್ ಒಂದರಲ್ಲಿ ಅತ್ಯಾಚಾರ ನಡೆದಿದೆ. ಕೆಳಹಂತದ ಕೋರ್ಟ್ ಈ ಅತ್ಯಾಚಾರಿಗೆ 4 ವರ್ಷ ಮತ್ತು ಮೂರು ತಿಂಗಳಿನ ಶಿಕ್ಷೆ ನೀಡಿತ್ತು. ಇದನ್ನು ಆತ ಮೇಲ್ಮನವಿ ಮೂಲಕ ಪ್ರಶ್ನಿಸಿದ್ದ.
ಕೋರ್ಟ್ ಈ ಶಿಕ್ಷೆಯನ್ನು ಮೂರು ವರ್ಷಗಳಿಗೆ ಇಳಿಸಿದೆ. ಇದಕ್ಕೆ ಅದು ನೀಡಿರುವ ಕಾರಣ ಆತ ಕೇವಲ 11 ನಿಮಿಷ ಮಾತ್ರ ರೇಪ್ ಮಾಡಿದ್ದಾನೆ ಎಂದು. ಆದ್ದರಿಂದ ಪ್ರತಿಭಟನೆ ಶುರುವಾಗಿದೆ.