
'5ಡಿ’ಯ ಚಿತ್ರೀಕರಣ ಮುಗಿದ ಬಳಿಕ ಅನುಭವ ಹಂಚಿಕೊಂಡ ಆದಿತ್ಯ & ಅದಿತಿ..
ನಟ ಆದಿತ್ಯ ಮತ್ತು ಅದಿತಿ ಪ್ರಭುದೇವ ಅಭಿನಯಿಸುತ್ತಿರುವ, ಹಿರಿಯ ನಿರ್ದೇಶಕ ಎಸ್. ನಾರಾಯಣ್ ನಿರ್ದೇಶನದ “5ಡಿ’ ಚಿತ್ರದ ಚಿತ್ರೀಕರಣ ಆಗಸ್ಟ್ 4ಕ್ಕೆ ಪೂರ್ಣಗೊಂಡಿದೆ.
ಚಿತ್ರೀಕರಣ ಮುಗಿದ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಟ ಆದಿತ್ಯ, “ಈ ಹಿಂದೆ ಎಸ್. ನಾರಾಯಣ್ ಅವರ ಜೊತೆಗೆ ನಿರ್ಮಾಪಕನಾಗಿ ಕೆಲಸ ಮಾಡಿದ್ದೆ. ಅವರ ಕೆಲಸವನ್ನು ಹತ್ತಿರದಿಂದ ನೋಡಿದ್ದೆ. ಆದರೆ ಅವರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರಲಿಲ್ಲ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಎಸ್. ನಾರಾಯಣ್ ನಿರ್ದೇಶನದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಕಥೆ, ಪಾತ್ರ ಏನೂ ಕೇಳದೆ ಈ ಸಿನಿಮಾ ಒಪ್ಪಿಕೊಂಡೆ ಎಂದಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ಅದಿತಿ ಪ್ರಭುದೇವ, “ಇಡೀ ಸಿನಿಮಾ ಟೀಮ್ ಒಂಥರಾ ಫ್ಯಾಮಿಲಿ ಥರ ಇತ್ತು. ತುಂಬ ಎಂಜಾಯ್ ಮಾಡಿಕೊಂಡು ಶೂಟಿಂಗ್ ಮಾಡುತ್ತಿದ್ದೆವು. ಎಲ್ಲರ ಸಹಕಾರದಿಂದ ಶೂಟಿಂಗ್ ಮುಗಿಸಿದ್ದೇ ಶೂಟಿಂಗ್ ಸಿನಿಮಾದ ಕಥೆ, ಪಾತ್ರ ಎಲ್ಲವೂ ಹೊಸಥರವಾಗಿದ್ದು ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದಿದ್ದಾರೆ.