ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುವ ಉದ್ಯಮಿ ಪತಿ: ಪತ್ನಿಯಿಂದ ಪೊಲೀಸ್ ದೂರು
Friday, August 20, 2021
ಮುಂಬೈ: ಪ್ರತಿಷ್ಠಿತ ಹಣಕಾಸು ಸಂಸ್ಥೆ ಉಪಾಧ್ಯಕ್ಷನೂ, ಉದ್ಯಮಿಯೂ ಆಗಿರುವ ತಮ್ಮ ಪತಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದಾನೆ ಎಂದು ಮಹಿಳೆಯೋರ್ವರು ಪೊಲೀಸ್ ದೂರು ದಾಖಲಿಸಿದ್ದಾರೆ.
40 ವರ್ಷದ ಈ ಮಹಿಳೆ, ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಇದೀಗ ಈಕೆ ತಮ್ಮ ಗಂಡನ ವಿರುದ್ಧವೇ ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯ ಮತ್ತು ವರದಕ್ಷಿಣೆ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.
ಮಲ್ಟಿ-ನ್ಯಾಷನಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತ ಮಹಿಳೆಯು ಮುಂಬೈ ಉಪನಗರದಲ್ಲಿರುವ ಪೊವಾಯಿ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಸೇರಿದಂತೆ ಆತನ
ಕುಟುಂಬದ ಎಂಟು ಸದಸ್ಯರ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಆದರೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2013 ಮೇ ತಿಂಗಖಲ್ಲಿ ತಮ್ಮ
ಮದುವೆಯಾಗಿದ್ದು, ಮದುವೆಯ ಬಳಿಕ ಅತ್ತೆ, ಮಾವ ಮತ್ತು ಇತರ ಕುಟುಂಬ ಸದಸ್ಯರು ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ಇದೀಗ ಪತಿ ಅಸ್ವಾಭಾವಿಕ ರೀತಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದು ದೂರು ನೀಡುತ್ತಿದ್ದೇನೆ ಎಂದು ನೊಂದ ಮಹಿಳೆ ತಿಳಿಸಿದ್ದಾರೆ. ತವರಿನಿಂದ ಹಣ ತೆಗೆದುಕೊಂಡು ಬರುವಂತೆವ ಪ್ರತಿದಿನ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಮಹಿಳೆ ಪತಿ ಮನೆಯನ್ನು ತೊರೆದು ಹೆತ್ತವರ ಜತೆ ವಾಸ ಮಾಡುತ್ತಿದ್ದಾರೆ.