ಈಕೆದ್ದು ಅಂಕಲ್ ಗಳನ್ನೇ ಟಾರ್ಗೆಟ್ ಮಾಡಿ ದುಡ್ಡು ಪೀಕಿಸುವ ಮಾಸ್ಟರ್ ಪ್ಲಾನ್.. ಇವರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ..?
Monday, August 23, 2021
ಭೋಪಾಲ್: ಹಲವಾರು ಮಂದಿಗೆ ಬ್ಲ್ಯಾಕ್‌ಮೇಲ್ ಮಾಡಿ ಅವರಿಂದ ದುಡ್ಡು ಪೀಕಿಸಿರುವ ಮಹಿಳೆ ವಿರುದ್ಧ 65 ವರ್ಷದ ವೃದ್ಧರೊಬ್ಬರು ದೂರು ನೀಡಿದ್ದು ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ.
ಮಹಿಳೆ ಒಳ್ಳೆಯ ಉದ್ಯೋಗದಲ್ಲಿದ್ದು ನಿವೃತ್ತರಾದ ವೃದ್ಧರನ್ನು ಅದ್ಹೇಗೋ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಅವರ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದಾರೆ. ಆದ್ದರಿಂದ ತಾನು ವಿಮೆ ಮಾಡಿಸುವುದಾಗಿ ಹೇಳಿ ಅವರನ್ನು ಪಾರ್ಕ್‌ಗೆ ಕರೆದಿದ್ದಾಳೆ. ನಂತರ ವಿಮೆ ಮಾಡಿಸಲು ಎಲ್ಲಾ ದಾಖಲೆ ಪಡೆದುಕೊಂಡಿರುವ ಇವರು ಆಕೆ ಹೇಳಿರುವ ಪಾರ್ಕ್‌ಗೆ ಹೋಗಿದ್ದಾರೆ. ನಂತರ ಸಲುಗೆಯಿಂದ ಅವರ ಬಳಿ ಬಂದ ಮಹಿಳೆ ಅಸಭ್ಯವಾಗಿ ವರ್ತಿಸಿದ್ದಾಳೆ. ಇದರ ವಿಡಿಯೋ ಅನ್ನು ಯುವಕ ಮಾಡಿಕೊಂಡಿದ್ದಾನೆ. ನಂತರ ಅವರ ಮೊಬೈಲ್‌ಗೆ ಆ ವಿಡಿಯೋ ಕಳುಹಿಸಿ, 2 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾಳೆ. ಇದನ್ನು ನೋಡಿದ ವೃದ್ಧ ಗಾಬರಿಯಾಗಿದ್ದಾರೆ. ನಂತರ ಮಹಿಳೆ ದುಡ್ಡು ಕೊಡದೇ ಹೋದರೆ ಈ ವಿಡಿಯೋ ವೈರಲ ಮಾಡಿ ಮಾನ ಕಳೆಯುವುದಾಗಿ ಹೇಳಿದ್ದಾಳೆ. ವೃದ್ಧ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ.ಮಹಿಳೆಯನ್ನು ಮತ್ತು ಆಕಿಗೆ ಸಾಥ್ ನೀಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.