
ಮದುವೆ ಮಂಟಪದಲ್ಲೇ ಗುಟ್ಕಾ ತಿನ್ನುತ್ತಿದ್ದ ವರನಿಗೆ ವಧುವಿನಿಂದಲೇ ಕಪಾಳಮೋಕ್ಷ!
ಮಹಾರಾಷ್ಟ್ರ: ನಾವು ದಿನಾಲೂ ಗುಟ್ಕಾ, ಪಾನ್ ಮಸಾಲಾ ತಿನ್ನುವವರನ್ನು ನೋಡುತ್ತಿರುತ್ತೇವೆ. ಸಾಮಾನ್ಯವಾಗಿ ಗುಟ್ಕಾ, ಪಾನ್ ಮಸಲಾ ತಿನ್ನುವವರಿಗೆ ಅದನ್ನು ಎಲ್ಲಿ ತಿನ್ನಬೇಕು, ಎಲ್ಲಿ ಉಗುಳಬೇಕು ಅನ್ನುವ ಪರಿಜ್ಞಾನವೇ ಇರೋದಿಲ್ಲ. ಇದೇ ರೀತಿ ಮದುವೆ ಮಂಟಪದಲ್ಲಿಯೇ ಗುಟ್ಕಾ ತಿನ್ನುತ್ತಿದ್ದ ವರನಿಗೆ, ವಧುವಿನಿಂದಲೇ ಕಪಾಳಕ್ಕೆ ಮೋಕ್ಷ ನಡೆದಿರುವ ಘಟನೆಯೊಂದು ನಡೆದಿದೆ.
ಮದುವೆಯ ಸಮಯದಲ್ಲಿ ವರ ಮಹಾಶಯ ಗುಟ್ಕಾ ತಿನ್ನುತ್ತಿದ್ದ. ಇದು ವಧುವಿಗೆ ಇಷ್ಟವಾಗಲಿಲ್ಲ, ಆಕೆ ಪದೇ ಪದೇ 'ಗುಟ್ಕಾ ಅಗಿಯಬೇಡಿ' ಎಂದು ಹೇಳಿದ್ದಾಳೆ. ಆದರೆ, ವರ ಬಾಯಿ ತುಂಬಾ ಗುಟ್ಕಾ ತುಂಬಿಕೊಂಡು 'ಹ್ಞುಂ, ಹ್ಞುಂ' ಎಂದು ಮಾತ್ರ ಹೇಳಿದ್ದಾನೆ ಎಂದು ಹೇಳಲಾಗಿದೆ. ಇದರಿಂದ ಕುಪಿತಗೊಂಡ ವಧು, ವರನ ಕಪಾಳಕ್ಕೆ ಬಾರಿಸಿದ್ದಾಳೆ.
ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕ ಜನರು ವೀಡಿಯೋಗಳನ್ನು ತಮ್ಮ ವಾಲ್ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ವೀಡಿಯೋಗೆ ಸಾಕಷ್ಟು ಕಮೆಂಟ್ಗಳು ಬರುತ್ತಿದೆ.