ಗುಪ್ತಾಂಗವನ್ನು ಹೊಲಿದರೂ, ಪತಿಯನ್ನು ಬಿಟ್ಟುಕೊಡದ ಪತ್ನಿ!
Saturday, August 28, 2021
ಸಿಂಗ್ರೌಲಿ (ಮಧ್ಯಪ್ರದೇಶ): ಪತಿಯೊಬ್ಬ ಪತ್ನಿಯ ಶೀಲವನ್ನು ಶಂಕಿಸಿ ಆಕೆಯ ಗುಪ್ತಾಂಗವನ್ನು ಹೊಲಿದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ರೈಲಾ ಗ್ರಾಮದಲ್ಲಿ ನಡೆದಿದೆ.
ನೀಚ ಪತಿಯ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಗ್ರೌಲಿಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ ತಿಳಿಸಿದ್ದಾರೆ. ಸದ್ಯ ಆರೋಪಿ ಪತಿ ಪರಾರಿಯಾಗಿದ್ದಾನೆ. ಇದೀಗ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆದರೆ ನೀಚ ಪತಿಯು ಕ್ಷಮಿಸಲಾರದ ತಪ್ಪನ್ನು ಎಸಗಿದ್ದರೂ ಸಹ ಕರುಣೆ ತೋರಿರುವ ಪತ್ನಿ ಯಾವುದೇ ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಡಿ, ಆತನನ್ನು ಬಂಧಿಸಬೇಡಿ ಎಂದು ಪೊಲೀಸರು ಸಂತ್ರಸ್ತೆ ಕೇಳಿಕೊಂಡಿದ್ದಾಳೆ. ಗಂಡನಿಗೆ ಬುದ್ಧಿವಾದ ಹೇಳಿ. ಆತನಿಗೆ ಒಂದೆರೆಡು ಮಾತು ಬೈಯಿರಿ, ಮುಂದೆ ಇಂತಹ ಕೃತ್ಯ ಎಸಗದಂತೆ ತಿಳಿ ಹೇಳಿರಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಸದ್ಯ ಸಂತ್ರಸ್ತೆ ಸಿಂಗ್ರೌಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆಕೆಯ ಆರೋಗ್ಯ ಸ್ಥಿರವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.