ಬಂಟ್ವಾಳ;ಅಣ್ಣನ ಹೆಂಡತಿಯೊಂದಿಗೆ ತಮ್ಮನ ಅನೈತಿಕ ವ್ಯವಹಾರ ಶಂಕೆ- ಕೊಲೆಯಲ್ಲಿ ಅಂತ್ಯ
Saturday, August 7, 2021
ಮಂಗಳೂರು: ಅತ್ತಿಗೆಯೊಂದಿಗೆ ಸಂಬಂಧವಿದೆಯೆಂದು ಸಂಶಯಿಸಿ ಅಣ್ಣನೇ ತಮ್ಮನನ್ನು ಹೊಡೆದು ಕೊಂದಿರುವ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬೊಂಡಾಲ ನಿವಾಸಿ ರವಿ ತಮ್ಮನನ್ನೇ ಹೊಡೆದು ಕೊಂದ ಆರೋಪಿ.
ಆರೋಪಿ ರವಿಯ ತಮ್ಮ ತಮ್ಮ ಸುಂದರ(30) ಅವಿವಾಹಿತರಾಗಿದ್ದು, ರವಿಯ ಹೆತ್ತವರ ಮನೆಯಲ್ಲಿಯೇ ವಾಸವಾಗಿದ್ದರು. ರವಿ ಅಲ್ಲಿಯೇ ಪಕ್ಕದಲ್ಲಿ ಬೇರೆ ಮನೆಯಲ್ಲಿ ವಾಸವಾಗಿದ್ದರು. ರವಿ ಪತ್ನಿ ಜಯಂತಿಯು ಸುಂದರರಿಗೆ ಊಟ-ತಿಂಡಿಯನ್ನು ನೀಡುತ್ತಿದ್ದರು. ಈ ಮಧ್ಯೆ ಅತ್ತಿಗೆ ಜಯಂತಿ ಹಾಗೂ ತಮ್ಮ ಸುಂದರನಿಗೂ ಅನೈತಿಕ ಸಂಬಂಧ ಇತ್ತು ಎಂಬ ವಿಚಾರದಲ್ಲಿ ರವಿ ಹಾಗೂ ಸುಂದರರ ಮಧ್ಯೆ ಜಗಳವಾಗುತ್ತಿತ್ತು.
ಆದರೆ ಆಗಸ್ಟ್ 6ರಂದು ರಾತ್ರಿ ಅವರೊಳಗೆ ಮತ್ತೆ ಗಲಾಟೆಯಾಗಿದೆ. ಈ ಸಂದರ್ಭ ಅಣ್ಣ ರವಿ ಮತ್ತು ತಮ್ಮ ಸುಂದರನಿಗೆ ಮನೆಯೊಳಗೆ ಗಲಾಟೆಯಾಗುತ್ತಿತ್ತು. ರಾತ್ರಿ 11.30 ಗಂಟೆಯ ಸುಮಾರಿಗೆ ಸುಂದರ ಜೋರಾಗಿ ಬೊಬ್ಬೆ ಹಾಕುವುದು ಕೇಳಿ ಕೊಡಲೇ ಅವರ ಇನ್ನೊಬ್ಬ ಅಣ್ಣ ರಮೇಶ್ ಅವರು ಹೋಗಿ ನೋಡಿದಾಗ ಅಣ್ಣ ರವಿಯು ಅಡಿಕೆ ಕೋಲಿನಿಂದ ಸುಂದರರ ತಲೆಗೆ ಬಡಿದಿದ್ದು, ಅವರು ನೆಲಕ್ಕೆ ಕುಸಿದು ಬಿದ್ದು ನರಳಾಡುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.