
ಮರುಜನ್ಮದ ಭರವಸೆ ನೀಡಿ ಅಮಾಯಕನ ಕೊಲೆ ಮಾಡಿದ ಢೋಂಗಿ ಬಾಬಾ... ಮುಂದಾಗಿದ್ದೇನು?
Saturday, August 14, 2021
ಕರೀಂನಗರ(ತೆಲಂಗಾಣ): ಮರುಜನ್ಮದ ಭರವಸೆ ನೀಡಿ ಅಮಾಯಕನೊಬ್ಬನನ್ನು ಕೊಲೆ ಮಾಡಿರುವ ಢೋಂಗಿ ಬಾಬಾನನ್ನು ಪೊಲೀಸರು ಬಂಧಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಜಗ್ತಿಯಲ್ ಜಿಲ್ಲೆಯ ಟಿಆರ್ ನಗರ ನಿವಾಸಿ ರಮೇಶ್ ಮಾಟ - ಮಂತ್ರಕ್ಕೆ ಬಲಿಯಾಗಿರುವ ವ್ಯಕ್ತಿ. ಪುಲ್ಲಯ್ಯ ಎಂಬಾತ ಮಾಟ - ಮಂತ್ರ ಮಾಡಿ ಆತನ ಕೊಲೆ ಮಾಡಿದ್ದಾನೆ ಎಂದು ಮೃತ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಮೃತಪಟ್ಟಿರುವ ರಮೇಶ್ ದೇಹದ ಮೇಲೆ ಪುಲ್ಲಯ್ಯ ಬೆಳಗ್ಗಿನಿಂದಲೂ ಪೂಜೆ ಮಾಡುತ್ತಲೇ ಇದ್ದನು. ಆದರೆ, ಸಂಜೆಯಾದರೂ ಆತನಿಗೆ ಜೀವ ಬಂದಿರಲಿಲ್ಲ. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಗ್ಟೇಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮಂತ್ರವಾದಿ ಪುಲ್ಲಯ್ಯನನ್ನು ವಿಚಾರಣೆಗೊಳಪಡಿಸಿದಾಗ ರಮೇಶ್ಗೆ ಮರುಜನ್ಮ ನೀಡುವ ಭರವಸೆ ನೀಡಿ, ಆತನನ್ನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಘಟನೆಯಿಂದ ಆಕ್ರೋಶಗೊಂಡಿರುವ ರಮೇಶ್ ಕುಟುಂಬ ಸದಸ್ಯರು, ಕರೀಂನಗರ ಹೆದ್ದಾರಿಯಲ್ಲಿ ಪುಲ್ಲಯ್ಯ ವಿರುದ್ಧ ಪ್ರತಿಭಟನೆ ನಡೆಸಿ, ಆತನ ಮನೆಯ ಮೇಲೆ ದಾಳಿ ಮಾಡಿ ಪೀಠೋಪಕರಣ ಧ್ವಂಸ ಮಾಡಿದ್ದಾರೆ.