ಮಾಲ್ಡೀವ್ಸ್ ನಲ್ಲಿ ತುಂಡುಡುಗೆಯಲ್ಲಿ ಕಾಣಿಸಿಕೊಂಡ ನಟಿ ಮೌನಿ ರಾಯ್
Saturday, August 14, 2021
ಮಂಗಳೂರು: ನಟನೆಯ ನಡುವೆಯೇ ಕೊಂಚ ಸಮಯ ಮಾಡಿಕೊಂಡು ನಟಿ ಮೌನಿರಾಯ್ ವಿದೇಶದಲ್ಲಿ ತನ್ನ ಗೆಳೆಯರ ಜೊತೆಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತು ಅವರು ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ಮೌನಿರಾಯ್ ತನ್ನ ಸ್ನೇಹಿತರೊಂದಿಗೆ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಈ ಬಗ್ಗೆ ತಮ್ಮ ಫೋಟೋಗಳನ್ನು ಶೇರ್ ಮಾಡಿರುವ ಅವರು ತುಂಡು ಉಡುಗೆ ತೊಟ್ಟುಕೊಂಡು ಸೂರ್ಯನ ಬೆಳಕಿಗೆ ಮೈಯೊಡ್ಡಿರುವ ಫೋಟೋವನ್ನು ಹಂಚಿಕೊಂಡೊದ್ದಾರೆ.
ಮಾಲ್ಡೀವ್ಸ್ನಲ್ಲಿ ಫ್ರೆಂಡ್ಸ್ ಜತೆ ಎಂಜಾಯ್ ಮಾಡ್ತಿರುವ ಮೌನಿರಾಯ್ ಇತ್ತೀಚೆಗೆ ಬೈಟೆ ಬೈಟೆ ಎಂಬ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದಿದ್ರು. ಸದ್ಯ ಇವರು ಮುಖರ್ಜಿ ಅವರ ಆ್ಯಕ್ಷನ್ ಫ್ಯಾಂಟಸಿ ಡ್ರಾಮಾ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್, ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ನಟಿಸಿದ್ದಾರೆ.