
ವಿದ್ಯುತ್ ಆಘಾತವಾಗಿ ಮೃತಪಟ್ಟ ಪ್ರಿಯಕರ.. ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಯಸಿ
ನೆಲ್ಲೂರು(ತೆಲಂಗಾಣ): ವಿದ್ಯುತ್ ಆಘಾತವಾಗಿ ಮೃತಪಟ್ಟ ಪ್ರಿಯಕರನ ಮರಣದಿಂದ ಮನನೊಂದು ಪ್ರೇಯಸಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ನೆಲ್ಲೂರು ಜಿಲ್ಲೆಯ ಕೊಡವಲೂರು ಹಳ್ಳಿಯಲ್ಲಿ ನಡೆದಿದೆ.
ಶ್ರೀಕಾಂತ್ ಕಳೆದ ಕೆಲ ಸಮಯಗಳಿಂದ ಸೌಮ್ಯಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಶುಕ್ರವಾರ ಆತ್ಮಕೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಶ್ರೀಕಾಂತ್ಗೆ ವಿದ್ಯುತ್ ಆಘಾತವಾಗಿದೆ. ಪರಿಣಾಮ ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.
ಪ್ರಿಯತಮನ ಮರಣದ ವಾರ್ತೆ ಕೇಳಿ ಮನನೊಂದಿರುವ ಪ್ರೇಯಸಿ ಸೌಮ್ಯಾ ಮಧ್ಯರಾತ್ರಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರ ಸಾವು ಎರಡೂ ಕುಟುಂಬದಲ್ಲಿ ಆಘಾತ ಮೂಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.