ಪ್ರೀತಿಸಿ ಮದುವೆಯಾದ ಎರಡೇ ದಿನಕ್ಕೆ ಪತ್ನಿಯನ್ನು ಕೊಂದ ಪತಿ..!! ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ..
Tuesday, August 10, 2021
ಮಧುರೈ : ಪ್ರೀತಿಸಿ ಮದುವೆಯಾದ ಎರಡೇ ದಿನಕ್ಕೆ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಗ್ಲಾಡಿಸ್ ರಾಣಿ (20) ಪತಿಯಿಂದಲೇ ಕೊಲೆಯಾದ ದುರ್ದೈವಿ. ಈಕೆಗೆ ಜೊತಿಮನಿ ಎಂಬುವವನ ಜೊತೆ ವಿವಾಹ ನಡೆದಿತ್ತು. ಇವರಿಬ್ಬರದ್ದು ಪ್ರೇಮವಿವಾಹ. ಆಗಸ್ಟ್ 4ರಂದು ಸುತ್ತಾಡಲೆಂದು ಈ ಜೋಡಿ ಹೊರಗಡೆ ಹೋಗಿದ್ದರು. ಆದರೆ ಮನೆಗೆ ವಾಪಸ್ ಬರುವಾಗ ಜೊತಿಮನಿ ಒಬ್ಬನೇ ಬಂದಿದ್ದ. ಹೆಂಡತಿಯಲ್ಲಿ ಎಂದು ಮನೆಯವರು ಕೇಳಿದಾಗ ಆಕೆ ಸ್ನೇಹಿತೆಯನ್ನು ಭೇಟಿ ಮಾಡಲು ಹೋಗಿದ್ದಾಳೆ ಎಂದು ತಿಳಿಸಿದ್ದ.
ಆಗಸ್ಟ್ 7 ರಂದು ಮಧುರೈನ ಹೊರ ರಸ್ತೆಯ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಗ್ಲಾಡಿಸ್ ರಾಣಿಯ ಮೃತ ದೇಹ ಪತ್ತೆಯಾಗಿದೆ. ಇತ್ತ ಜೋತಿ ಮಣಿ ಕೂಡ ಆಗಸ್ಟ್ 5 ರಂದು ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ಕೂಡ ನೀಡಿದ್ದ. ಆದರೆ, ಆತನ ನಡುವಳಿಕೆ ಮೇಲೆ ಅನುಮಾನ ಪಟ್ಟ ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಗ್ಲಾಡಿಸ್ ರಾಣಿ ಮದುವೆಯ ಮುಂಚೆನೇ ಆಕೆ 4 ತಿಂಗಳ ಗರ್ಭಿಣಿಯಾಗಿದ್ದಳು. ಅವಳ ಗರ್ಭಕ್ಕೆ ಕಾರಣ ನಾನು ಅಲ್ಲ. ಅದಕ್ಕಾಗಿಯೇ ಮದುವೆಯಾಗಲು ನಿರಾಕರಿಸಿದ್ದೆ. ಆದರೆ, ಆಕೆಯ ಮನೆಯವರು ಬೆದರಿಕೆ ಹಾಕಿ ಮದುವೆ ಮಾಡಿಸಿದರು. ಆಗಸ್ಟ್ 4 ರಂದು ಮನೆಯಿಂದ ಹೊರಗೆ ಹೋದಾಗ ಇದೆ ವಿಚಾರಕ್ಕೆ ಗಲಾಟೆ ನಡೆಯಿತು. ಕೋಪ ಬಂದು ಆಕೆಯನ್ನು ಕೊಲೆ ಮಾಡಿ ಬೀಸಾಕಿದೆ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.