
ಮದುವೆಯಾದ ಆರೇ ಗಂಟೆಯಲ್ಲಿ ಮುರಿದುಬಿದ್ದ ಸಂಬಂಧ....ಪತ್ನಿಯ ಹಣೆಗೆ ಸಿಂಧೂರ ಮಾಯ..!!
ಗರ್ಹ್ವಾ(ಜಾರ್ಖಂಡ್): ಮದುವೆಯಾದ ಕೇವಲ ಆರೇ ಗಂಟೆಯಲ್ಲಿ ಹೆಂಡತಿಯ ಸಿಂಧೂರ ಅಳಿಸಿ ಹಾಕಿದ ಘಟನೆ ಜಾರ್ಖಂಡ್ನ ಗರ್ಹ್ವಾದಲ್ಲಿ ನಡೆದಿದೆ.
ಶುಕ್ರವಾರ ತಡರಾತ್ರಿ ರಾಕೇಶ್ ಎಂಬಾತ ಮಾಗ್ವಾನ್ ಗ್ರಾಮದ ಟೆಟ್ರಿ ಕುನ್ವಾರ್ ಮನೆಗೆ ನುಗ್ಗಿದ್ದಾನೆ ಮನೆಯವರೆಲ್ಲರೂ ಆತನನ್ನು ಕಳ್ಳ ಎಂದು ತಿಳಿದು ಕಟ್ಟಿ ಹಾಕಿದ್ದಾರೆ. ಆದರೆ ನಾನು ಕಳ್ಳನಲ್ಲ ನಾನು ಟೆಟ್ರಿ ಕುನ್ವಾರ್ನ ಮಗಳನ್ನು ಪ್ರೀತಿಸುತ್ತಿದ್ದು ಆಕೆಯನ್ನು ಭೇಟಿಯಾಗುವ ನೆಪದಲ್ಲಿ ಬಂದಿದ್ದೇನೆ ಎಂದು ತಿಳಿಸಿದ್ದಾನೆ.
ಈ ವೇಳೆ, ಯುವತಿಯ ಪ್ರಶ್ನೆ ಮಾಡಿದಾಗ, ಆಕೆ ಸಹ ಒಪ್ಪಿಕೊಂಡಿದ್ದಾಳೆ.ಶನಿವಾರ ಬೆಳಗ್ಗೆ ಯುವಕನ ತಂದೆ_ತಾಯಿ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಎರಡು ಕಡೆಯವರು ಇವರ ಮದುವೆಗೆ ಒಪ್ಪಿಕೊಂಡಿದ್ದಾರೆ. ಅದರಂತೆ ಮಾಗ್ವಾನ್ನಲ್ಲಿ ಮದುವೆ ನಡೆದಿದೆ.
ಇವರ ಮದುವೆ ಮಾಡಿಕೊಂಡಿರುವ ವಿಚಾರವನ್ನ ಕೆಲವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ, ಎರಡು ಕಡೆಯವರನ್ನ ಠಾಣೆಗೆ ಕರೆಯಿಸಿಕೊಂಡಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ಯುವತಿ ವಯಸ್ಸು 19 ಹಾಗೂ ಯುವಕನ ವಯಸ್ಸು 16 ವರ್ಷ ಎಂದು ತಿಳಿದು ಬಂದಿದೆ. ಅಪ್ರಾಪ್ತ ಹುಡುಗನ ಜೊತೆ ಮದುವೆ ಮಾಡಿರುವುದು ಕಾನೂನು ಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಯುವಕ ತಾನು ಮದುವೆ ಮಾಡಿಕೊಂಡಿದ್ದ ಯುವತಿಯ ಸಿಂಧೂರ ಅಳಸಿ ಹಾಕಿದ್ದಾನೆ.