ಕಳೆದ ಮೂರು ವರ್ಷಗಳಿಂದ 15 ವರ್ಷದ ಹುಡುಗಿ ಹಾಗೂ 18 ವರ್ಷದ ಅಜಿತ್ ಕುಮಾರ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಹುಡುಗನಿಗೆ ಉದ್ಯೋಗವಿಲ್ಲ ಎಂದು ಹುಡುಗಿಯ ಮನೆಯವರು ಆತನನ್ನು ತಿರಸ್ಕರಿಸಿದ್ದರು.ಆದರೆ ಅಜಿತ್ ತನ್ನ ಗೆಳತಿಯನ್ನು ಬೇರೆಯವರೊಂದಿಗೆ ಮದುವೆ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ನಿರ್ಧಾರ ಮಾಡಿ ಈ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ ಓಡಿಹೋಗಲು ನಿರ್ಧಾರ ಮಾಡಿದ್ದಾರೆ. ಅದರಂತೆ ಕಳೆದ ಶನಿವಾರ ಸಂಜೆ, ಅಜಿತ್ ತನ್ನ ಕೆಲವು ಸ್ನೇಹಿತರೊಂದಿಗೆ ಮೋಟಾರ್ ಸೈಕಲ್ನಲ್ಲಿ ಹುಡುಗಿಯನ್ನ ಕರೆದುಕೊಂಡು ಮನೆ ಬಿಡಲು ನಿರ್ಧರಿಸಿದ್ದಾನೆ.
ಈ ಸಂದರ್ಭದಲ್ಲಿ ಈ ಜೋಡಿ ಚಿಕ್ಕಪ್ಪನ ಕೈಯಲ್ಲಿ ಸಿಕ್ಕಿಬಿದ್ದಿದೆ.ಬಳಿಕ ಗ್ರಾಮಸ್ಥರು ಇವರಿಬ್ಬರ ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾರೆ. ಜತೆಗೆ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಮದುವೆ ಸಹ ಮಾಡಿಸಿದ್ದಾರೆ.