
ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೆ ಭೀಕರವಾಗಿ ಹತ್ಯೆ ಮಾಡಿದ ಪಾಗಲ್ ಪ್ರೇಮಿ...!
ನೆಲಮಂಗಲ: ನನ್ನ ಮಗಳ ತಂಟೆಗೆ ಬರಬೇಡ ಎಂದು ಹೇಳಿದ್ದಕ್ಕೆ ನಡುರಸ್ತೆಯಲ್ಲಿ ಯುವತಿಯ ತಂದೆಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಮೂಲದ ನಾಗಪ್ಪ (49) ಕೊಲೆಯಾದವರು. ಇಂದು ಬೆಳಗ್ಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿದ ಇಬ್ಬರು ಯುವಕರು ರಾಡ್ ನಿಂದ ಹೊಡೆದು ಹತ್ಯೆಮಾಡಿದ್ದಾರೆ. ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಆರೋಪಿ ನರೇಶ್ ಎಂಬಾ ಮೃತರ ಮಗಳನ್ನು ಪ್ರೀತಿಸುತ್ತಿದ್ದ ನಂತೆ. ಆದರೆ ಇದು ಒನ್ ಸೈಡ್ ಲವ್ ಆಗಿತ್ತು. ನಿನ್ನೆ ನರೇಶ್ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ನಾಗಪ್ಪ ಅವರ ಮನೆಯ ಮುಂದೆ ಬಂದು ಗಲಾಟೆ ಮಾಡಿದ್ದು, ಈ ಬಗ್ಗೆ ನರೇಶನಿಗೆ ಬುದ್ಧಿವಾದ ಹೇಳಿದ್ದರಂತೆ ನಾಗಪ್ಪ. ಇದರಿಂದ ಕೋಪಗೊಂಡಿದ್ದ ಆರೋಪಿ ಕೊಲೆ ಮಾಡಿರುವುದಾಗಿ ಮೃತ ನಾಗಪ್ಪನ ಸಂಬಂಧಿ ಸುರೇಶ್ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿಂತೆ ನೆಲಮಂಗಲ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದುವರಿಸಿದ್ದಾರೆ.