
Whatsappನಲ್ಲಿ ವ್ಯಾಕ್ಸಿನೇಷನ್ ಸ್ಲಾಟ್ ಬುಕ್ ಮಾಡಲು ಇಲ್ಲಿದೆ ವಿಧಾನ...
ನವದೆಹಲಿ: ಈಗ ಕೇಂದ್ರ ಆರೋಗ್ಯ ಸಚಿವಾಲಯವು ಕೋವಿನ್ ಪೋರ್ಟಲ್ ಜೊತೆಗೆ ವಾಟ್ಸ್‌ಆ್ಯಪ್(WhatsApp)ನಲ್ಲೂ ಕೂಡ ಲಸಿಕೆಗೆ ಹೆಸರು ನೋಂದಾಯಿಸಿಕೊಂಡು, ಸ್ಥಳ-ಸಮಯ ನಿಗದಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ.
ವಾಟ್ಸ್ಆ್ಯಪ್ನಲ್ಲಿ ವ್ಯಾಕ್ಸಿನೇಷನ್ ಸ್ಲಾಟ್ ಬುಕ್ ಮಾಡಲು ನೀವು ಈ ವಿಧಾನ ಅನುಸರಿಸಿ:
೧. http://wa.me/919013151515 ಎಂಬ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ವೆಬ್ ಬ್ರೌಸರ್‌ನಲ್ಲಿ ಈ ಲಿಂಕ್ ಅನ್ನು ಟೈಪ್ ಮಾಡಿ
೨.ಬಳಿಕ ‘Go to chat’ ಅಥವಾ ‘Continue to chat’ ಎಂದು ಹಸಿರು ಬಣ್ಣದಲ್ಲಿನ ಅಕ್ಷರದ ಮೇಲೆ ಕ್ಲಿಕ್ ಮಾಡಿ ನಂತರ 'Book Slot' ಮೇಲೆ ಕ್ಲಿಕ್ ಮಾಡಿ
೩. ಮತ್ತೆ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ 6 ಸಂಖ್ಯೆಗಳ OTP ನಮೂದಿಸಿ
೪.ಕೋವಿನ್ ಪೋರ್ಟಲ್ಗೆ ರಿಜಿಸ್ಟರ್ ಆದ ಫಲಾನುಭವಿಗಳ ಪಟ್ಟಿಯನ್ನು ನೀವು ಸ್ವೀಕರಿಸುತ್ತೀರಿ.
೫. ಮುಂದುವರಿಯಲು ನೀವು ಸದಸ್ಯರನ್ನು ಆಯ್ಕೆ ಮಾಡಿ.
೬.ಚಾಟ್‌ಬಾಟ್ ಕಳುಹಿಸುವ ಸೂಚನೆಗಳನ್ನು ಅನುಸರಿಸಿದರೆ ನಿಮ್ಮ ಬುಕಿಂಗ್ ಪ್ರಕ್ರಿಯೆ ಮುಗಿಯುತ್ತದೆ.
೭. ಬಳಿಕ ಚಾಟ್‌ಬಾಟ್ ನಿಮಗೆ ಅಪಾಯಿಂಟ್‌ಮೆಂಟ್ ಲೆಟರ್ ಕಳುಹಿಸುತ್ತದೆ.
ಫಲಾನುಭವಿಗಳನ್ನು ಸೇರಿಸಲು, ನೀವು https://www.cowin.gov.in/ ಗೆ ಭೇಟಿ ನೀಡಬಹುದು