ಮದುವೆ ಮನೆಯಲ್ಲಿ ಆವರಿಸಿದ ಸೂತಕ.. ವದು-ವರ ಸೇರಿ ಅತ್ತಿಗೆಯ ದುರಂತ ಸಾವು..!!
Sunday, August 8, 2021
ಬಾಗಲಕೋಟೆ: ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ನವ ದಂಪತಿ ಮತ್ತು ಅತ್ತಿಗೆ ಮೂವರೂ ದುರಂತ ಅಂತ್ಯ ಕಂಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಸದ್ದಾಂ ರಾಜೇಸಾಬ ಸೊನ್ನದ ಜಾತಗಾರ(27) ಮತ್ತು ಆತನ ಪತ್ನಿ ಸಲೀಮಾ ಸದ್ದಾಂ(25) ಹಾಗೂ ಸದ್ದಾಂ ಅವರ ಅಣ್ಣನ ಪತ್ನಿ ರೇಷ್ಮಾ ಇಸ್ಮಾಯಿಲ್ (26) ಮೃತ ಪಟ್ಟಿದ್ದಾರೆ. ಕಳೆದ ಜುಲೈ 15ರಂದು ಸದ್ದಾಂ ಮತ್ತು ಸಲೀಮಾ ಇವರ ಮದುವೆ ನಡೆದಿತ್ತು. ನಂತರ ಸಂಬಂಧಿಕರ ಮದುವೆಗೆಂದು ಜಾತಗಾರ ಕುಟುಂಬದ ಇಬ್ಬರು ಮಕ್ಕಳು ಸೇರಿ 7 ಮಂದಿ ಆಂಧ್ರದ ಕಡಪಗೆ ಕಾರಿನಲ್ಲಿ ಹೊರಟ್ಟಿದ್ದರು.
ನಂತರ ಮದುವೆ ಮುಗಿದು ಕಾರಿನಲ್ಲಿ ವಾಪಸ್ ಮುಧೋಳಕ್ಕೆ ಬರುವ ಮಾರ್ಗಮಧ್ಯೆ ಆಂಧ್ರದ ನೆಲ್ಲೂರು ಬಳಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ನವದಂಪತಿ ಸದ್ದಾಂ-ಸಲೀಮಾ, ಅತ್ತಿಗೆ ರೇಷ್ಮಾ ಈ ಮೂವರು ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.