ಪೋರ್ನೋಗ್ರಫಿ ಕೇಸ್: ಸತತ 8 ಗಂಟೆಗಳ ಕಾಲ ನಟಿ ಶರ್ಲಿನ್ ಚೋಪ್ರಾ ವಿಚಾರಣೆ
Saturday, August 7, 2021
ಮುಂಬೈ ಪೊಲೀಸ್ನ ಪ್ರಾಪರ್ಟಿ ಸೆಲ್ ನಲ್ಲಿ ರಾತ್ರಿ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಈ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಅವರೊಂದಿಗೆ ಇದ್ದ ಸಂಪರ್ಕದ ಬಗ್ಗೆ ಪ್ರಶ್ನೆ ಮಾಡಲಾಗಿದೆ.
ಆರ್ಮ್ಪ್ರೈಮ್ ಮೀಡಿಯಾದ ಬಗ್ಗೆ ಕೂಡ ಪೊಲೀಸರು ಪ್ರಶ್ನಿಸಿದ್ದು, ಅದರಲ್ಲಿನ ನಿಯಮಗಳು ಮತ್ತು ಷರತ್ತುಗಳೇನು? ಎಷ್ಟು ವಿಡಿಯೋಗಳನ್ನು ಆರ್ಮ್ಸ್ಪ್ರೈಮ್ನಲ್ಲಿ ಚಿತ್ರೀಕರಿಸಿದ್ದೀರಿ ಎಂಬ ಬಗ್ಗೆ ಮಾಹಿತಿ ಕೇಳಿದ್ದಾರೆ.