ಇದು ಕಿಸ್ ಕಥೆ;ಬಲವಂತವಾಗಿ ರಾಜ್ ಕುಂದ್ರಾ ಕಿಸ್ ಮಾಡಿದರು ಎಂದ ನಟಿಗೆ ಪೊಲೀಸರಿಂದ ನೋಟೀಸ್!
Saturday, August 7, 2021
ಮುಂಬೈ: ರಾಜ್ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ನಟಿ ಶೆರ್ಲಿನ್ ಛೋಪ್ರಾರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.
ನಟಿ ಶೆರ್ಲಿನ್ ಛೋಪ್ರಾರನ್ನು ಉದ್ಯಮಿ ರಾಜ್ ಕುಂದ್ರಾರನ್ನು ಬಂಧಿಸಿರುವ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಚಿತ್ರವೊಂದಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ನನ್ನ ಜತೆ ಮಾತನಾಡಿದ್ದರು, ಹೀಗೆ ನಮ್ಮಿಬ್ಬರ ಪರಿಚಯವಾಗಿತ್ತು. ಅದಾದ ಮೇಲೆ ಕುಂದ್ರಾ ನನ್ನ ಮನೆಗೆ ಬರಲು ಶುರು ಮಾಡಿದರು. ನನ್ನನ್ನು ಚುಂಬಿಸಲು ಪ್ರಯತ್ನಿಸುತ್ತಿದ್ದರು. ಪತ್ನಿ ಶಿಲ್ಪಾ ಜತೆ ನನ್ನ ಸಂಬಂಧ ಅಷ್ಟು ಚೆನ್ನಾಗಿಲ್ಲ, ಮನೆಯಲ್ಲಿ ನನಗೆ ತುಂಬಾ ಹಿಂಸೆಯಾಗುತ್ತಿದೆ ಎಂದುಕೊಂಡು ನನ್ನನ್ನು ಹತ್ತಿರ ಮಾಡಿಕೊಳ್ಳಲು ನೋಡುತ್ತಿದ್ದರು, ಇದರಿಂದಾಗಿ ನನ್ನ ಬಳಿ ಅಸಭ್ಯವಾಗಿ ನಡೆದುಕೊಂಡರು ಎಂದು ಕುಂದ್ರಾ ವಿರುದ್ಧ ನಟಿ ದೂರಿನಲ್ಲಿ ಹೇಳಿದ್ದಾರೆ.
ರಾಜ್ ಕುಂದ್ರಾ ಅವರ ಬಗ್ಗೆ ಮೊದಲು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು ತಾವೇ ಎಂದು ಶೆರ್ಲಿನ್ ಚೋಪ್ರಾ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ಆಯಾಮಗಳಿಂದ ಪೊಲೀಸರು ತನಿಖೆ ಮುಂದುವರಿದಿದೆ.