
ಈಕೆ ಬಾಯಿ ನೋಡಿದ್ರೆ ನೀವು ಶಾಕ್ ಆಗ್ತೀರಾ..!! ಇದು ವಿಶ್ವದ ಅತಿ ದೊಡ್ಡ ಬಾಯಿ ಎಂದು ಗಿನ್ನಿಸ್ ರೆಕಾರ್ಡ್...
Sunday, August 1, 2021
ವಾಷಿಂಗ್ಟನ್: ಅಮೆರಿಕದ ಟಿಕ್ಟಾಕ್ ಸ್ಟಾರ್ ಸಮಂತಾ ರಾಮ್‌ಸ್ಡೆಲ್(31) ಅತಿದೊಡ್ಡ ಬಾಯಿ ಎಂದುದಾಖಲೆ ಬರೆದಿರುವ ಮಹಿಳೆ.
ಆಕೆ ಬೋರ್ ಆಗುತ್ತಿದೆ ಎನ್ನುವ ಕಾರಣಕ್ಕೆ ಟಿಕ್ಟಾಕ್ ವಿಡಿಯೋ ಮಾಡಲಾರಂಭಿಸಿದಳು. ಅದರಲ್ಲಿ ಆಕೆಯ ದೊಡ್ಡ ಬಾಯಿ ನೋಡಿ ಎಲ್ಲರೂ ಆಕೆಯನ್ನು ಮೆಚ್ಚಿಕೊಳ್ಳಲಾರಂಭಿಸಿದರಂತೆ. ಹಾಗೆ ವಿಡಿಯೋ ಮಾಡುತ್ತಾ ಆಕೆಯ ದೊಡ್ಡ ಬಾಯಿ ಎಲ್ಲ ಕಡೆ ಫೇಮಸ್ ಆಗತೊಡಗಿತು. ದೊಡ್ಡ ಬಾಯಿಯಿರುವ ನೀನು ಗಿನ್ನೆಸ್ ರೆಕಾರ್ಡ್ಗೆ ಪ್ರಯತ್ನ ಮಾಡು ಎಂದು ಆಕೆಯ ಸ್ನೇಹಿತರೆಲ್ಲರೂ ಅವಳಿಗೆ ಹುರಿದುಂಬಿಸಿದರು. ಅದರಂತೆ ಆಕೆ ಗಿನ್ನೆಸ್ ರೆಕಾರ್ಡ್ಗೆ ಪ್ರಯತ್ನ ಪಟ್ಟಿದ್ದಾಳೆ. ಗಿನ್ನೆಸ್ ರೆಕಾರ್ಡ್ಗೆಂದು ಆಕೆಯ ಬಾಯಿಯನ್ನು ಪೂರ್ತಿಯಾಗಿ ತೆಗೆದು ಅಳತೆ ಮಾಡಲಾಗಿದೆ. ಆಕೆಯ ಬಾಯಿ ಬರೋಬ್ಬರಿ 2.56 ಇಂಚು ಅಂದರೆ 6.52 ಸೆಂ.ಮೀ ಇದೆ. ಪೂರ್ತಿ ಸೇಬುಹಣ್ಣನ್ನು ಆಕೆ ಬಾಯಿಯೊಳಗೆ ಇಟ್ಟುಕೊಳ್ಳಬಹುದಂತೆ. ಪೂರ್ತಿ ವಿಶ್ವದಲ್ಲಿ ಅತಿ ದೊಡ್ಡ ಬಾಯಿ ಇರುವ ಮಹಿಳೆ ಆಕೆ ಎಂದು ಕರೆಯಲಾಗಿದೆ.