
ಆನ್ಲೈನ್ ಗೇಮ್ ನಲ್ಲಿ 40 ಸಾವಿರ ಕಳೆದುಕೊಂಡ ಬಾಲಕ.. ಅಮ್ಮ ಬೈದಿದ್ದಕ್ಕೆ Suicide..!!
ಭೋಪಾಲ್: ಆನ್ಲೈನ್ ಗೇಮ್ ಹುಚ್ಚಿನಿಂದ 40 ಸಾವಿರ ರೂಪಾಯಿ ಕಳೆದುಕೊಂಡ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಛತಾರ್ ಪುರ್ ಜಿಲ್ಲೆಯಲ್ಲಿ ಶಾಂತಿನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 13 ವರ್ಷದ ಬಾಲಕ ಫ್ರೀ ಫೈರ್ ಹೆಸರಿನ ಆಟವನ್ನು ಆಡಲಾರಂಭಿಸಿದ್ದಾನೆ. ಆ ಆಟಕ್ಕೆ ಹಂತ ಹಂತವಾಗಿ ಸರಿ ಸುಮಾರು 40 ಸಾವಿರ ರೂಪಾಯಿ ಖರ್ಚು ಮಾಡಿದ್ದೇನೆ. ಇತ್ತೀಚೆಗೆ ಅದೇ ರೀತಿ ಆಟಕ್ಕೆಂದು ಅಮ್ಮನ ಖಾತೆಯಿಂದ 1500 ರೂಪಾಯಿ ವಿತ್ಡ್ರಾ ಮಾಡಿದ್ದಾನೆ. ಕೆಲಸದಲ್ಲಿದ್ದ ತಾಯಿಯ ಮೊಬೈಲ್ಗೆ ಅದರ ಮೆಸೇಜ್ ಬಂದಿದೆ. ಅದನ್ನು ನೋಡಿ ಮಗನಿಗೆ ಕರೆಮಾಡಿ ಬೈದಿದ್ದಾಳೆ. ಅಮ್ಮ ಬೈದಿದ್ದರಿಂದ ಬೇಜಾರಾದ ಮಗ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾನು ಅಮ್ಮನ ಖಾತೆಯಿಂದ ಆನ್ಲೈನ್ ಆಟಕ್ಕಾಗಿ 40 ಸಾವಿರ ರೂಪಾಯಿ ತೆಗೆದಿದ್ದಾಗಿ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾನೆ.