-->

ಮಂಗಳೂರು ವಿವಿ ಪದವಿ ಪರೀಕ್ಷೆ- ಹಾಜರಾಗದ ಕೇರಳ ವಿದ್ಯಾರ್ಥಿಗಳಿಗೆ ಇದೆ ವಿಶೇಷ ಪರೀಕ್ಷೆ

ಮಂಗಳೂರು ವಿವಿ ಪದವಿ ಪರೀಕ್ಷೆ- ಹಾಜರಾಗದ ಕೇರಳ ವಿದ್ಯಾರ್ಥಿಗಳಿಗೆ ಇದೆ ವಿಶೇಷ ಪರೀಕ್ಷೆ

 


 

ಮಂಗಳೂರು:  ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬಾಕಿ ಉಳಿದಿದ್ದ ಪರೀಕ್ಷೆಗಳು ಇಂದು ಆರಂಭವಾಗಿದೆ.


ಮಂಗಳೂರಿನ ಹಂಪನಕಟ್ಟೆಯಲ್ಲಿರುವ  ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂದು (ಆಗಸ್ಟ್‌ 2) 839 ವಿದ್ಯಾರ್ಥಿಗಳು ಪರೀಕ್ಷೆ ಬರೆದರು .  ಈ ಕಾಲೇಜಿನ ಪ್ರಥಮ ಬಿ.ಎ (36), ಬಿ.ಎಸ್ಸಿ (109), ಬಿ.ಕಾಂ (289), ತೃತೀಯ ಬಿಸಿಎ (12), ಅಂತಿಮ ಬಿ.ಎ (29), ಬಿ.ಎಸ್ಸಿ (127), ಬಿ. ಕಾಂ (224) ಮತ್ತು ಅಂತಿಮ ಬಿಬಿಎಂ (3) ವಿದ್ಯಾರ್ಥಿಗಳು ಪರೀಕ್ಷೆ ಬರೆದರು.


 

ಕೊರೋನಾ- 19 ದಿಂದ ಪೀಡಿತವಾಗಿರುವ ಕೇರಳದ 157 ಪದವಿ ವಿದ್ಯಾರ್ಥಿಗಳು ಮತ್ತು 36 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ. ಪದವಿಯಲ್ಲಿ ಬಿ.ಎ ಯ 52, ಬಿ.ಕಾಂ ನ 52 ಮತ್ತು ಬಿ.ಎಸ್ಸಿಯ 53 ವಿದ್ಯಾರ್ಥಿಗಳಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಕೇರಳದ 19 ಎಂ.ಕಾಂ, 2 ಎಂ.ಎ (ಹಿಂದಿ), 4 ಎಂ.ಎ (ಇತಿಹಾಸ), ೫ ಅರ್ಥಶಾಸ್ತ್ರ ಎಂ.ಎ  ಮತ್ತು 6 ಎಂ.ಎಸ್ಸಿ (ರಸಾಯನ ಶಾಸ್ತ್ರ) ಯ ವಿದ್ಯಾರ್ಥಿಗಳಿದ್ದಾರೆ.   
 

 ಕೇರಳದಲ್ಲಿ ಕೊರೊನಾ ಪ್ರಕರಣ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ಮತ್ತಿತ್ತರ ಸಮಸ್ಯೆಯಿಂದ ಪರೀಕ್ಷೆ ಬರೆಯಲು ಅನಾನುಕೂಲವಾದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಲು ವಿಶ್ವವಿದ್ಯಾನಿಲಯ ನಿರ್ಧರಿಸಿದೆAds on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99