Mangalore- ಯಾವ ಯಾವ ರೀತಿ ಗೋಲ್ಡ್ ಸ್ಮಗ್ಲಿಂಗ್ ಮಾಡ್ತಾರೆ ಗೊತ್ತಾ?- ಮಹಿಳೆಯರು ಬಳಸುವ ಈ ಸಾಮಾಗ್ರಿಯಲ್ಲಿತ್ತು ಅಪಾರ ಚಿನ್ನ! (Video)
Saturday, August 21, 2021
ಮಂಗಳೂರು; ಗೋಲ್ಡ್ ಸ್ಮಗ್ಲಿಂಗ್ ಮಾಡಲು ಸ್ಮಗ್ಲರ್ ಗಳು ನಾನಾ ವಿಧಾನ ಬಳಸುತ್ತಾರೆ. ಮಂಗಳೂರಿನಲ್ಲಿ ಗೋಲ್ಡ್ ಸ್ಮಗ್ಲರ್ ವೊಬ್ಬ ಹೊಸ ವಿಧಾನ ಬಳಸಿ ಸಿಕ್ಕಿಬಿದ್ದಿದ್ದಾನೆ.
ಉತ್ತರಕನ್ನಡ ಜಿಲ್ಲೆಯ ಮುರ್ಡೆಶ್ವರದ ವ್ಯಕ್ತಿ ಇಂದು ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದ. ಈತನನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಹಲವು ಹೇರ್ ಬ್ಯಾಂಡ್ ಗಳು ಸಿಕ್ಕಿದೆ.
ಮಹಿಳೆಯರು ಸಾಮಾನ್ಯವಾಗಿ ಬಳಸುವ ಹೇರ್ ಬ್ಯಾಂಡನ್ನು ಮನೆಯವರಿಗೆ ಕೊಂಡೊಯ್ಯುತ್ತಿದ್ದಾನೆ ಎಂಬಂತೆ ಈತ ಇದನ್ನು ಸಾಗಾಟ ಮಾಡುತ್ತಿದ್ದ. ಅನುಮಾನ ಬಂದ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಹೇರ್ ಬ್ಯಾಂಡನ್ನು ಪರಿಶೀಲಿಸಿದ್ದಾರೆ.ಮೇಲ್ಬಾಗದಲ್ಲಿ ಚಿನ್ನವನ್ನು ತಂತಿ ರೂಪದಲ್ಲಿ ಅಡಗಿಸಿ ಅದನ್ನು ಸಣ್ಣ ಸಣ್ಣ ಹರಳುಗಳಲ್ಲಿ ಮುಚ್ಚಲಾಗಿತ್ತು. ಅನುಮಾನ ಬಂದ ಕಸ್ಟಮ್ಸ್ ಅಧಿಕಾರಿಗಳು ಇದನ್ನು ಒಡೆದು ನೋಡಿದಾಗ ಚಿನ್ನ ಸಾಗಾಟ ಪತ್ತೆಯಾಗಿದೆ. ಇದರಲ್ಲಿ 115 ಗ್ರಾಂ ಚಿನ್ನ ಪತ್ತೆಯಾಗಿದ್ದು ಇದರ ಮೌಲ್ಯ ರೂ 5,58,900 ಎಂದು ಅಂದಾಜಿಸಲಾಗಿದೆ.
ಇನ್ನೂ ಆಗಷ್ಟ್ 12 ರಂದು ಇನ್ನೊಂದು ಚಿನ್ನ ಸ್ಮಗ್ಲಿಂಗ್ ಪತ್ತೆ ಹಚ್ಚಿರುವುದಾಗಿ ಕಸ್ಟಮ್ ಅಧಿಕಾರಿಗಳು ತಿಳಿಸಿದ್ದಾರೆ.ಕಾಸರಗೋಡು ಮೂಲದ ವ್ಯಕ್ತಿ ಮಿಕ್ಸರ್ ಗ್ರೈಂಡರ್ ನಲ್ಲಿ 350.330 ಗ್ರಾಂ ಚಿನ್ನ ಸ್ಮಗ್ಲಿಂಗ್ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.ಇದರ ಮೌಲ್ಯ ರೂ 1685087 ಎಂದು ಅಂದಾಜಿಸಲಾಗಿದೆ. ಎರಡು ಪ್ರಕರಣಗಳ ತನಿಖೆಯನ್ನು ಕಸ್ಟಮ್ಸ್ ಅಧಿಕಾರಿಗಳು ಮುಂದುವರಿಸಿದ್ದಾರೆ.
Best complements to the officers of Customs , Mangaluru for detecting novel modus operandi to smuggle Gold. @cbic_india @FinMinIndia @PIBBengaluru @DDNewslive @Cusmglr pic.twitter.com/gsE0d36dfR
— Bengaluru Customs (@blrcustoms) August 21, 2021