MANGALORE- ಬೀಡಿ ಕೊಂಡೊಯ್ಯುತ್ತಿದ್ದ ವೇಳೆ ನಡೆದ ದುರ್ಘಟನೆ- ರೈಲ್ವೆ ಹಳಿಯಲ್ಲಿ ಎಡವಿ ಬಿದ್ದ ಜೊತೆಗಾರ್ತಿಯನ್ನು ಎತ್ತಲು ಹೋದಾಗ ಯಮನಾಗಿ ಬಂದ ರೈಲು- ಇಬ್ಬರು ಸಾವು
Saturday, August 21, 2021
ಮಂಗಳೂರು: ಮಂಗಳೂರಿನಲ್ಲಿ ಬೀಡಿ ಕೊಂಡೊಯ್ಯುತ್ತಿದ್ದ ಇಬ್ಬರು ಮಹಿಳೆಯರು
ಮಂಗಳೂರಿನಿಂದ ಕೇರಳಕ್ಕೆ ಹೋಗುವ ರೈಲಿಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ..
ಮಂಗಳೂರು ಮಹಾಕಾಳಿಪಡ್ಪು ರೈಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದೆ. ಮಂಗಳೂರಿನ ಜೆಪ್ಪು ಕಡು್ಪಾಡಿಯ ಮಹಿಳೆಯರಿಬ್ಬರು ಬೀಡಿಯನ್ನು ಬ್ರಾಂಚ್ ಗೆ ಕೊಂಡೊಯ್ಯುತ್ತಿದ್ದರು. ಈ ವೇಳೆ ರೈಲ್ವೆ ಹಳಿ ದಾಟಬೇಕಿದ್ದು ಹಳಿ ದಾಟುವಾಗ ಮಹಿಳೆಯೊಬ್ಬರು ಎಡವಿ ಬಿದ್ದಿದ್ದಾರೆ. ಜೊತೆಗಾರ್ತಿ ಮಹಿಳೆ ಬಿದ್ದದನ್ನು ಕಂಡ ಮತ್ತೋರ್ವಾಕೆ ಆಕೆಯನ್ನು ಮೇಲೆತ್ತಲು ನೋಡಿದ್ದಾರೆ. ಈ ವೇಳೆ ಮಂಗಳೂರು ಜಂಕ್ಷನ್ ನಿಂದ ಕೇರಳ ಕಡೆಗೆ ಹೋಗುತ್ತಿದ್ದ ರೈಲು ಢಿಕ್ಕಿ ಹೊಡೆದಿದೆ. ಇಬ್ಬರ ಮೇಲೆ ರೈಲು ಹರಿದಿದ್ದು ಇಬ್ಬರು ಸ್ಥಳದಲ್ಲಿಯೆ ಕೊನೆಯುಸಿರೆಳಿದ್ದಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ