-->
ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ‌ ಸಾಮೂಹಿಕ ಅತ್ಯಾಚಾರ..!! ಆರೋಪಿಗಳ ಬಂಧನ..

ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ‌ ಸಾಮೂಹಿಕ ಅತ್ಯಾಚಾರ..!! ಆರೋಪಿಗಳ ಬಂಧನ..

ನವದೆಹಲಿ:22 ವರ್ಷದ ವಿವಾಹಿತ ಮಹಿಳೆಯ ಮೇಲೆ
ಚಲಿಸುತ್ತಿದ್ದ ಕಾರಿನಲ್ಲಿ  ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಈ ಬಗ್ಗೆ ಯುವತಿ ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕೆಲಸ ಕೊಡಿಸುವುದಾಗಿ ಹೇಳಿ ಕಾರಿನೊಳಗೆ ಹತ್ತಿಸಿಕೊಂಡ ಇಬ್ಬರು ಕಾಮುಕರು ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಸಂತ್ರಸ್ತೆ ತನ್ನ ಪತಿಯೊಂದಿಗೆ ಗಾಜಿಯಾಬಾದ್ ಪ್ರದೇಶದಲ್ಲಿ ವಾಸವಾಗಿದ್ದು ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯಿಂದ ಫೋನ್‌ ಕರೆ ಬಂದಿತ್ತು. ತನ್ನ ಹೆಸರು ರೋಹಿತ್ ಎಂದು ಹೇಳಿದ ಆತ ಕೆಲಸದ ಬಗ್ಗೆ ಮಾಹಿತಿ ಕೇಳಿದ್ದಾನೆ. ಹೀಗೆ ಮಾತನಾಡುತ್ತಾ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾನೆ. ಆಗಸ್ಟ್‌ 16 ರಂದು ಆತನನ್ನು ಭೇಟಿ ಮಾಡಲು ಮಹಿಳೆ ಹೋಗಿದ್ದಾಳೆ.
ಆರೋಪಿ ರೋಹಿತ್‌ ಮಹಿಳೆ ಭೇಟಿಗಾಗಿ ಗಾಜಿಯಾಬಾದ್‌ನ ಲಾಲ್ ಕೌನ್ ಪ್ರದೇಶಕ್ಕೆ ಬಂದವನು ಅಲ್ಲಿಂದ ನೇರವಾಗಿ ದೆಹಲಿಗೆ ಆಕೆಯನ್ನು ಕರೆ ತಂದಿದ್ದಾನೆ. ಆತನೊಂದಿಗೆ ಮತ್ತೆೋರ್ವ ವ್ಯಕ್ತಿಯೂ ಇದ್ದು, ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.

Ads on article

Advertise in articles 1

advertising articles 2

Advertise under the article