ಈ ಯುವತಿಯದು ಚಿಂಪಾಜಿಯೊಂದಿಗೆ ಲವ್- ಮುಂದೇನಾಯಿತೆಂದರೆ....
Tuesday, August 24, 2021
ಇಲ್ಲೊಬ್ಬಳು ಮಹಿಳೆ ಮೃಗಾಲಯದ ಚಿಂಪಾಂಜಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ .ಅಷ್ಟೇ ಅಲ್ಲದೆ ಆ ಚಿಂಪಾಂಜಿ ಕೂಡ ಮಹಿಳೆಯ ಮೇಲೆ ಪ್ರೀತಿ ಬೆಳೆಸಿಕೊಂಡಿದೆ. ಇವರದ್ದು ನಾಲ್ಕು ವರ್ಷಗಳ ಪ್ರೀತಿ.
ಬೆಲ್ಜಿಯಂನ ಆಯಂಟ್ವರ್ಪ್ ಮೃಗಾಲಯದಲ್ಲಿ ಇರುವ ಚಿಂಪಾಂಜಿ ನೋಡಲು ಮಹಿಳೆ ಪ್ರತಿ ವಾರವೂ ಬರುತ್ತಿದ್ದಳು.
ಚಿಂಪಾಂಜಿ ಗ್ಲಾಸ್ ರೂಂ ಒಳಗೆ ಇರುತ್ತಿತ್ತು. ಮಹಿಳೆ ಅದನ್ನು ಸನ್ನೆಯಲ್ಲಿ ಮಾತನಾಡಿಸುತ್ತಿದ್ದಳು. ಚಿಟಾ ಹೆಸರಿನ ಚಿಂಪಾಂಜಿ ಹಾಗೂ ಮಹಿಳೆ ಪರಸ್ಪರ ಮುತ್ತು ಕೊಟ್ಟುಕೊಳ್ಳುವಷ್ಟು ಗಾಢವಾಗಿ ಪ್ರೀತಿಸುತ್ತಿದ್ದಾರೆ.
ಇತ್ತೀಚೆಗೆ ಚಿಟಾ ಬೇರೆ ಯಾವ ಪ್ರಾಣಿ ಅಥವಾ ಮನುಷ್ಯರ ಜೊತೆ ಮಾತನಾಡದೆ ಮಹಿಳೆಗಾಗಿ ಕಾಯುತ್ತಿತ್ತು. ಒಬ್ಬಂಟಿಯಾಗಿರಲು ಇಷ್ಟಪಡುತ್ತಿತ್ತು. ಇದನ್ನು ಕಂಡ ಮೃಗಾಲಯದ ಸಿಬ್ಬಂದಿ ಮಹಿಳೆಗೆ ಮೃಗಾಲಯ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.
ಆಕೆ ತಾನು ಪ್ರಾಣಿ ಪ್ರಿಯೆ ಎಂದು ಝೂಗೆ ಬರುತ್ತಿದ್ದಳು. ಇದೀಗ ನಾನು ಮತ್ತು ಚಿಟಾ ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದಾಳೆ. ಮೃಗಾಲಯ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಕ್ರಮವನ್ನು ಖಂಡಿಸಿ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾಳೆ.