ನೆಟ್ಟಿಗನ ಪ್ರಪೋಸ್ ಗೆ ನಟಿ ಖುಷ್ಬು ಕೊಟ್ಟ ಉತ್ತರ ಹೀಗಿದೆ ನೋಡಿ...
Tuesday, August 24, 2021
ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಖುಷ್ಬೂ ಅಭಿಮಾನಿಗಳೊಂದಿಗೆ ಚಾಟ್ ಕೂಡ ಮಾಡುತ್ತಿರುತ್ತಾರೆ. ಇದೀಗ ಖುಷ್ಬೂ ಅವರ ಹೊಸ ಲುಕ್ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇದೀಗ ಬರೋಬ್ಬರಿ 12 ಕೆಜಿ ತೂಕ ಇಳಿಸಿಕೊಂಡಿರುವ ಖುಷ್ಬೂ ಚಿರಯುವತಿಯಂತೆ ಕಂಗೊಳಿಸುತ್ತಿದ್ದಾರೆ. ಇದೀಗ ಅವರ ಅದರಲ್ಲೂ ಓರ್ವ ಅಭಿಮಾನಿ ಖುಷ್ಬೂ ಸೌಂದರ್ಯಕ್ಕೆ ಮಾರು ಹೋಗಿ ಮದುವೆ ಪ್ರಸ್ತಾಪವನ್ನೇ ಮುಂದಿಟ್ಟಿದ್ದಾನೆ. ನಾನು ನಿಮ್ಮನ್ನು ಮದುವೆ ಆಗಲು ಬಯಸಿದ್ದೇನೆ ಮೇಡಂ ಎಂದು ಕೇಳಿದ್ದಾನೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖುಷ್ಬೂ, ಓ..ಓ ಕ್ಷಮಿಸಿ ನೀವು ತುಂಬಾ ತಡವಾಗಿದ್ದೀರಿ. ನಿಖರವಾಗಿ ಹೇಳುವುದಾದರೆ 21 ವರ್ಷಕ್ಕಿಂತ ಸ್ವಲ್ಪ ತಡವಾಗಿದೆ. ಆದರೂ ನನ್ನ ಗಂಡನೊಂದಿಗೆ ಪರಿಶೀಲಿಸೋಣ ಎಂದಿದ್ದಾರೆ. ಖುಷ್ಬೂ ಅವರು ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. .