ಕಾಂಚನಾ-3 ಸಿನಿಮಾ ನಟಿಯ ಸಾವು..ಪ್ರಕರಣ ಭೇದಿಸಿದ ಪೊಲೀಸರು
Tuesday, August 24, 2021
ಚೆನ್ನೈ: ಇದೇ 20ರಂದು 24 ವರ್ಷದ ನಟಿಯ ಮೃತದೇಹ ಗೋವಾದ ಅಪಾರ್ಟ್ಮೆಂಟ್ವೊಂದರಲ್ಲಿ ಪತ್ತೆಯಾಗಿದೆ.
ರಷ್ಯಾ ಮೂಲದ ನಟಿ ಅಲೆಕ್ಸಾಂಡ್ರಾ ಕಾಂಚನಾ-3 ಸೇರಿದಂತೆ ಅನೇಕ ತಮಿಳು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗೋವಾದ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಬಗ್ಗೆ ಪೊಲೀಸರು ಸಾಕಷ್ಟು ತಲೆಕೆಡಿಸಿಕೊಂಡಿದ್ದರು.
ಆದರೆ ಇದೀಗ ಚೆನ್ನೈ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಇದು ಆತ್ಮಹತ್ಯೆಯೇ ಆಗಿದ್ದು, ಇದಕ್ಕೆ ಕಾರಣ ಒಬ್ಬ ಫೋಟೋಗ್ರಾಫರ್ ನೀಡುತ್ತಿದ್ದ ಕಿರುಕುಳ ಎಂದು ಪೊಲೀಸರಿಗೆ ತಿಳಿದುಬಂದಿದೆ. ತಮಿಳಿನ ಕಾಂಚನಾ-3 ಚಿತ್ರ ಸೂಪರ್ ಹಿಟ್ ಆದ ಬಳಿಕ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದ ವೇಳೆ ಈಕೆಗೆ ಫೋಟೋಗ್ರಾಫರ್ ಪರಿಚಯವಾಗಿದೆ. ನಂತರ ಈತ ಆಕೆಯ ಕೆಲವೊಂದು ಅಸಭ್ಯ,ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಈ ಕುರಿತು ಅಲೆಕ್ಸಾಂಡ್ರಾ ಅವರು 2019ರಲ್ಲಿಯೇ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ಫೋಟೋಗ್ರಾಫರ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.