ಅತ್ತೆ ಮಾಡಿದ ಆರೋಪ ಸುಳ್ಳು ಎಂದು ಸಾಬೀತು ಪಡಿಸಲು ಕೆಂಡದ ಮೇಲೆ ನಡೆದ ಸೊಸೆ...
Tuesday, August 24, 2021
ಭೋಪಾಲ್: ಸೊಸೆಯ ಮೇಲೆ ಅತ್ತೆ ಮಾಡುತ್ತಿರುವ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ಸೊಸೆ ಬೆಂಕಿ ಮೇಲೆ ನಡೆದಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾಡದ ಮಾವೂ ವ್ಯಾಪ್ತಿಯ ರಾಮಾಕೋನಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಇದೇ ತಿಂಗಳು 17ನೇ ತಾರೀಖು ಸೊಸೆ ಅತ್ತೆ ಜತೆ ಬಾಬಾ ದರಬಾರ್ಗೆ ಬಂದಿದ್ದಳು. ನಿಮ್ಮ ಸೊಸೆ ಪತಿಗೆ ಆಹಾರದಲ್ಲಿ ಏನೋ ಸೇರಿಸಿ ಆತನನ್ನ ವಶ ಮಾಡಿಕೊಂಡಿದ್ದಾಳೆ ಎಂದು ಬಾಬಾ ಸೊಸೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾನೆ. ಹೇಳಿದ್ದಾನೆ. ಹಾಗೇನೂ ಮಾಡಲಿಲ್ಲ ಎಂದು ಸೊಸೆ ಹೇಳಿದರೂ ಅತ್ತೆ ಕೇಳಲಿಲ್ಲ. ಒಂದು ವೇಳೆ ಸೊಸೆ ಹಾಗೆ ಮಾಡದಿದ್ದರೆ ಆಕೆ ಕೆಂಡದ ಮೇಲೆ ನಡೆಯಲಿ, ಒಂದು ವೇಳೆ ಅವಳಿಗೆ ಏನೂ ಆಗದಿದ್ದರೆ ಅವಳು ಸತ್ಯ ಹೇಳುತ್ತಿದ್ದಾಳೆ ಎಂದು ಸಾಬೀತು ಆಗುತ್ತದೆೆ ಎಂದಿದ್ದಾನೆ. ಸೊಸೆ ಆಗಿದ್ದಾಗಲಿ ಎಂದು ಕೆಂಡದ ಮೇಲೆ ನಡೆದು ಹೊರ ಬಂದಿದ್ದಾಳೆ.
ಈ ಕುರಿತು ಪ್ರತಿಕ್ರಿಯಿಸಿರುವ ಪತಿ, ನಮ್ಮ ಮನೆಯವರು ಮೌಢ್ಯಕ್ಕೆ ಒಳಗಾಗಿದ್ದು ಸರಿಯಲ್ಲ. ಆದರೆ ನನ್ನ ಪತ್ನಿ ಬಗ್ಗೆ ಅತ್ತೆಗೆ ಇದ್ದ ಸಂಶಯ ನಿವಾರಣೆಯಾಗಿದೆ ಎಂದಿದ್ದಾನೆ.