
ಕಬಕ ಪ್ರಕರಣ- ತಾಲಿಬಾನ್ ಸಂಸ್ಕೃತಿಯ ನ್ನು ಮಾಡಲು ಬಿಡುವುದಿಲ್ಲ; ಸಚಿವ ಕೋಟ ಗುಡುಗು (Video)
ಮಂಗಳೂರು; ಪುತ್ತೂರಿನ ಕಬಕದಲ್ಲಿ ವೀರಸಾವರ್ಕರ್ ಪೊಟೋ ತೆಗೆಯಬೇಕೆಂದಯ ಸ್ವಾತಂತ್ರ್ಯ ರಥಯಾತ್ರೆಗೆ ಅಡ್ಡಿಪಡಿಸಿದ ಘಟನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಾರವಾಗಿ ಪ್ರತಿಕ್ರೀಯಿಸಿದ್ದು ಜಿಲ್ಲೆಯಲ್ಲಿ ತಾಲಿಬಾನ್ ಸಂಸ್ಕೃತಿಯನ್ನು ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ಗೃಹಮಂತ್ರಿ ಮತ್ತು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯುತವಾದ ಜಿಲ್ಲೆ. ಸ್ವಾತಂತ್ರ್ಯ ಸಂಭ್ರಮಕ್ಕೆ ಇಡೀ ದೇಶವೆ ಹೆಮ್ಮೆ ಪಡುವ ದಿನ ಸ್ವಾತಂತ್ರ್ಯ ರಥವನ್ನು ಅಡ್ಡ ಹಾಕುತ್ತಾರೆಂದರೆ ತಾಲಿಬಾನ್ ಸಂಸ್ಕೃತಿ. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲು ಬಿಡುವುದಿಲ್ಲ. ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದವರನ್ನು ಬಂಧಿಸಿ , ಕ್ರಮ ಕೈಗೊಳ್ಳಲು ಗೃಹಮಂತ್ರಿಗಳಿಗೆ ಆಗ್ರಹಪಡಿಸುತ್ತೇನೆ ಎಂದರು.