
ಮೆಲ್ಕಾರ್ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯ ದ ಧ್ವಜಾ ರೋಹಣ
ಬಂಟ್ವಾಳ ಅ.15: ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯ ದ ಧ್ವಜಾರೋಹಣ ಕಾರ್ಯಕ್ರಮವನ್ನು ಸರಳವಾಗಿ ಸರಕಾರದ ಮಾರ್ಗಸೂಚಿಯಂತೆ ನೆರವೇರಿಸಲಾಯಿತು.
ಕಾಲೇಜಿನ ಪ್ರಿನ್ಸಿಪಾಲರಾದ ಬಿ. ಕೆ. ಅಬ್ದುಲ್ ಲತೀಫ್ ಧ್ವಜಾರೋಹಣಗೈದು ಶುಭ ಹಾರೈಸಿದರು. ಹಿರಿಯ ಉಪನ್ಯಾಸಕ ಎಮ್. ಡಿ. ಮಂಚಿ ಭಾರತದ ಪ್ರಸ್ತುತ ಸನ್ನಿವೇಶ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಬೆಳಕು ಚೆಲ್ಲಿದರು. ಕಾರ್ಯಕ್ರಮದಲ್ಲಿ ಇತಿಹಾಸ ಉಪನ್ಯಾಸಕಿ ಗೀತಾ, ಸಿಬ್ಬಂದಿಗಳಾದ ಹರೀಣಾಕ್ಷಿ, ಗೀತಾ, ಹಮೀದ್, ತಸ್ಲೀಮ್ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕ ಅಬ್ದುಲ್ ಮಜೀದ್. ಎಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ವಾಣಿಜ್ಯಶಾಸ್ತ್ರ ಉಪನ್ಯಾಸಕ ಮೊಹಮ್ಮದ್ ಶಿಯಾಬ್ ಧನ್ಯವಾದವಿತ್ತರು.