
ದೇಶಾದ್ಯಂತ ಸ್ವಾತಂತ್ರ್ಯ ಸಂಭ್ರಮಾಚರಣೆ: ಕಬಕ ಗ್ರಾಪಂ ಸ್ವಾತಂತ್ರ್ಯ ರಥಯಾತ್ರೆಯಲ್ಲಿ ಸಾವರ್ಕರ್ ಚಿತ್ರ, ಎಸ್ ಡಿಪಿಐ ತಡೆಗೆ ಯತ್ನ (VIDEO)
ಮಂಗಳೂರು: ದೇಶಾದ್ಯಂತ 75ನೇ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವ ಆಚರಣೆ ನಡೆಯುತ್ತಿದ್ದು, ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತ್ರಿವರ್ಣ ಧ್ವಜ ಹಾರಿಸಿದರು. ಅದೇ ರೀತಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ಚೊಚ್ಚಲ ಧ್ವಜಾರೋಹಣ ಮಾಡಿದರು.
75ನೇ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ನಿಮಿತ್ತ ಕಬಕ ಗ್ರಾಪಂ ವತಿಯಿಂದ ರಥಯಾತ್ರೆ ಆಯೋಜನೆ ಮಾಡಲಾಗಿದೆ. ಈ ರಥದಲ್ಲಿ ಸಾವರ್ಕರ್ ಚಿತ್ರ ಅವಳಡಿಸಿರುವುದರಿಂದ ಗರಂ ಆದ ಎಸ್ ಡಿಪಿಐ ಚಿತ್ರವನ್ನು ತೆಗೆಯಬೇಕೆಂದು ಆಕ್ರೋಶ ವ್ಯಕ್ತಪಡಿಸಿ, ರಥಯಾತ್ರೆ ತಡೆಗೆ ಯತ್ನಿಸಿದೆ.
ಆದರೆ ಗ್ರಾಪಂನವರು ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಎರಡೂ ಕಡೆಯಿಂದ ವಾಗ್ವಾದ ಉಂಟಾಗಿದೆ. ಬಳಿಕ ಆಕ್ರೋಶ ವ್ಯಕ್ತಪಡಿಸಿದ, ಎಸ್ ಡಿಪಿಐ ಘೋಷಣೆ ಕೂಗಿ ಅಲ್ಲಿಂದ ತೆರಳಿದೆ.