ಕಿಡ್ನಿ ಮಾರಲು ಹೋದ ಮಹಿಳೆಗೆ ಮೋಸ.. ಅಲ್ಲಿ ನಡೆದದ್ದೇನು ಗೊತ್ತಾ...
Friday, August 20, 2021
ಬೆಂಗಳೂರು: ಕಿಡ್ನಿ ಕೊಟ್ಟರೆ ಒಂದು ಕೋಟಿ ರೂಪಾಯಿ ಕೊಡುವುದಾಗಿ ಹೇಳಿ ಸೈಬರ್ ಕಳ್ಳರು, ಮಹಿಳೆಯಿಂದ 7.97 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.
ವೈಯಾಲಿಕಾವಲ್‌ನ ಎಂಬ 36 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟದ ಬಗ್ಗೆ ಜಾಹೀರಾತು ನೋಡಿದ ಮಹಿಳೆ, ಅದರಲ್ಲಿನ ಮೊಬೈಲ್ ಫೋನ್ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದಾಕೆ ಡಾ.ಸೀಮಾ ರೈ ಎಂದು ಪರಿಚಯ ಮಾಡಿಕೊಂಡು, ಕಿಡ್ನಿ ಹೊಂದಾಣಿಕೆಯಾದರೆ 1 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿದ್ದಾರೆ. ಆನಂತರ ನೋಂದಣಿ ಮಾಡಿಕೊಳ್ಳಲು 6,999 ರೂ. ಪಾವತಿ ಮಾಡಬೇಕೆಂದು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದಾದ ಮೇಲೆ ರಕ್ತ ಪರೀಕ್ಷೆ, ಆರ್‌ಬಿಐ ಮಾರ್ಗಸೂಚಿ ಶುಲ್ಕವೆಂದು ಮಹಿಳೆಯಿಂದ 7.97 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ.
ಈಗ ಮಹಿಳೆ ನೀಡಿದ ದೂರಿನ ಮೇರೆಗೆ ಕೇಂದ್ರ ವಿಭಾಗ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.