-->

ಪತ್ನಿಯ ತಂಟೆಗೆ ಬರಬೇಡ ಎಂದದ್ದಕ್ಕೆ ಹತ್ಯೆ- ಆರೋಪಿ ಪೊಲೀಸ್ ಬಲೆಗೆ!

ಪತ್ನಿಯ ತಂಟೆಗೆ ಬರಬೇಡ ಎಂದದ್ದಕ್ಕೆ ಹತ್ಯೆ- ಆರೋಪಿ ಪೊಲೀಸ್ ಬಲೆಗೆ!

ಬೆಂಗಳೂರು: ಹೆಂಡತಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಎಂದು ಪ್ರಶ್ನಿಸಿದ ಗಂಡನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಾದಿಲ್ ಪಾಷಾ(40) ಮೃತ ದುರ್ದೈವಿ. ಈ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.ಅಬಾರ್ಜ್ ಖಾನ್ ಬಂಧಿತ ಆರೋಪಿ.  ಸಾದಿಲ್ ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದ ಹಾಗೆಯೇ ಆರೋಪಿ ಅಬಾರ್ಜ್ ಖಾನ್ ಮೆಡಿಕಲ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ಸಾದಿಲ್​ ಪತ್ನಿ ಜೊತೆಗೆ ಅರ್ಬಾಜ್​ ಸಲುಗೆ ಬೆಳೆಸಿಕೊಂಡಿದ್ದ ಈ ವಿಚಾರವಾಗಿ ಸಾದಿಲ್, ಅಬಾರ್ಜ್ ಬಳಿ ಪ್ರಶ್ನಿಸಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆಯಾಗಿತ್ತು‌. ಇದಾದ ಬಳಿಕವೂ ಮತ್ತೆ ಹೆಂಡತಿ ಮೇಲೆ ಕಣ್ಣು ಹಾಕಿದ್ದ ಆತ ಸಾದಿಲ್ ಹತ್ಯೆಗೆ ಸಂಚು ರೂಪಿಸಿದ್ದ. ಇದಕ್ಕೆ ಸಹೋದರ ಕೂಡ ಸಾಥ್ ನೀಡಿದ್ದಾನೆ.ಆ.16 ರಂದು ಮಾತುಕತೆಗಾಗಿ ಕರೆಯಿಸಿಕೊಂಡು ಜೆ.ಜೆ ನಗರ ರೈಲ್ವೆ ಟ್ರ್ಯಾಕ್ ಬಳಿ ಸಾದಿಲ್​ನನ್ನು ಇಬ್ಬರು ಹತ್ಯೆ ಮಾಡಿದ್ದಾರೆ.  ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99