ಕಾಳಿಮಾತೆಯ ಮುಂದೆ ಈ ಯುವತಿ ಮಾಡಿದ್ದೇನು? ಇದು ಈಕೆಯ ಭಕ್ತಿಯ ಪರಾಕಾಷ್ಠೆ
Friday, August 20, 2021
ಲಖನೌ: ಇಲ್ಲೊಬ್ಬ ಭಕ್ತೆ ತನ್ನ ಇಷ್ಟದ ದೇವರಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಸಂಭವಿಸಿದೆ.
ಕುಡಿ ಗ್ರಾಮದ ಬಳಿಯ ಅರಣ್ಯದ ಪ್ರದೇಶದಲ್ಲಿ ಇರುವ ಮಹಾ ಭದ್ರಕಾಳಿ ದೇವಸ್ಥಾನಕ್ಕೆ ಯುವತಿ ತನ್ನನ್ನು ತಾನೇ ಬಲಿ ಕೊಟ್ಟುಕೊಂಡಿದ್ದಾರೆ. ಈಕೆ ಕಾಳಿ ಮಾತೆಯನ್ನು ತುಂಬಾ ನಂಬಿದ್ದಳು. ಅಷ್ಟೇ ಅಲ್ಲ ತನ್ನನ್ನು ತಾನೇ ಕಾಳಿ ಮಾತೆಯ ಮಗಳು ಎಂದು ಯೋಚಿಸಲು ಶುರು ಮಾಡಿದ್ದಳು. ನಾನು ಮಹಾ ಭದ್ರಕಾಳಿಯ ಮಗಳು. ನನ್ನ ತಾಯಿಗೋಸ್ಕರ ನನ್ನ ಜೀವವನ್ನು ತ್ಯಾಗ ಮಾಡುತ್ತೇನೆ ಅಂದುಕೊಂಡು ಊರಿನ ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ ಯುವತಿ ತೆರಳಿದ್ದಾಳೆ. ಸಾಕಷ್ಟು ದಿನಗಳಿಂದ ಪೂಜೆ ಮಾಡುತ್ತಿದ್ದ ಯುವತಿ ಕೊನೆಗೂ ತಾಯಿ ಮಹಾಕಾಳಿಗೆ ಜೀವ ತ್ಯಾಗ ಮಾಡಬೇಕೆಂದುಕೊಂಡು ಮೊದಲು ತನ್ನ ಕತ್ತನ್ನು ಸೀಳಿ ಮಾತೆಯ ವಿಗ್ರಹಕ್ಕೆ ಅರ್ಪಿಸಿದ್ದಾಳೆ. ಬಳಿಕ ಅತಿಯಾದ ರಕ್ತಸ್ರಾವ ಆಗುತ್ತಿದ್ದರೂ ದೇವಸ್ಥಾನದ ಗಂಟೆಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.
ಎಂದಿನಂತೆ ಪೂಜೆ ಮಾಡಲು ಸಂಜೆ ಪೂಜಾರಿ ದೇವಸ್ಥಾನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.