ಪತ್ನಿಯ ಎಫ್ ಬಿ, ಇನ್ ಸ್ಟಾಗ್ರಾಂ ಹ್ಯಾಕ್ ಮಾಡಿರುವ ಪತಿ ಮಾಡಿದ ಕೃತ್ಯವೇನು ಗೊತ್ತೇ
Wednesday, August 11, 2021
ಭುವನೇಶ್ವರ: ಪತಿಯೋರ್ವ ಸ್ವತಃ ಪತ್ನಿಯ ಮೊಬೈಲ್ ಹ್ಯಾಕ್ ಮಾಡಿ ಆಕೆಯ ಅಶ್ಲೀಲ ಚಿತ್ರಗಳನ್ನು ಆಕೆಯದ್ದೇ ಫೇಸ್ ಬುಕ್, ಇನ್ ಸ್ಟಾಗ್ರಾಂ ಖಾತೆಗೆ ಅಪ್‌ಲೋಡ್ ಮಾಡಿರುವ ಆತಂಕಕಾರಿ ಘಟನೆಯೊಂದು ವರದಿಯಾಗಿದೆ. ಮದುವೆಯಾದ ಆರೇ ತಿಂಗಳಲ್ಲಿ ಈ ಪತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಯ.
ಕಟಕ್ನಲ್ಲಿರುವ ಬಂಕಿ ಪ್ರದೇಶದ ನಿವಾಸಿ ಸಂತ್ರಸ್ತೆ ಯುವತಿಗೆ ವರದಕ್ಷಿಣೆ ವಿಚಾರವಾಗಿ ಪತಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಸಂತ್ರಸ್ತೆ ಗಂಡನ ಮನೆಯನ್ನು ತೊರೆದು ತವರು ಮನೆ ಸೇರಿದ್ದಳು. ನಿನ್ನೆ ಸಂಜೆ ಟ್ವಿನ್ ಸಿಟಿ ಪೊಲೀಸ್ ಆಯುಕ್ತ ಸೌಮೇಂದ್ರ ಪ್ರಿಯದರ್ಶಿನಿ ಅವರನ್ನು ಭೇಟಿಯಾಗಿರುವ ಆಕೆ ತನ್ನ ಗಂಡನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾಳೆ. ಅಲ್ಲದೆ, ಕಳೆದ ಜುಲೈ 2ರಂದೇ ಮಹಿಳಾ ಪೊಲೀಸ್ ಠಾಣೆಯಲ್ಲೂ ಸಂತ್ರಸ್ತೆ ದೂರು ನೀಡಿದ್ದಳು.
"ಹೈದರಾಬಾದ್ ಮೂಲದ ಕಂಪನಿಯಲ್ಲಿ ತನ್ನ ಪತಿ ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆತ ನನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡಿ, ಕಳೆದ ಒಂದು ತಿಂಗಳಿಂದ ನನ್ನ ಖಾಸಗಿ ವೀಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾನೆ. ಒಡಿಶಾ ಹೈಕೋರ್ಟ್ನಿಂದ ಆರೋಪಿಗೆ ಜಾಮೀನು ಸಿಕ್ಕಿದೆ. ಇತ್ತೀಚೆಗೆ, ಆತ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ನನ್ನ ಆತ್ಮೀಯ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾನೆ. ಆತನನ್ನು ಶೀಘ್ರವಾಗಿ ಬಂಧಿಸಬೇಕು ಮತ್ತು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಬಯಸುತ್ತೇನೆ “ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಆದರೆ, ತನ್ನ ಮೇಲಿನ ಆರೋಪಗಳನ್ನು ಪತಿ ನಿರಾಕರಿಸಿದ್ದಾರೆ.