ಒಂದೇ ಸಿನಿಮಾದಲ್ಲಿ ತ್ರಿವಳಿ ಬ್ಯೂಟಿಗಳು.. ಯಾವುದು ಆ ಸಿನಿಮಾ...?
Friday, August 13, 2021
ಫರ್ಹಾನ್ ನಿರ್ವಿುಸಿ-ನಿರ್ದೇಶಿಸುತ್ತಿರುವ ‘ಜೀ ಲೇ ಜರಾ’ ಎಂಬ ಹೊಸ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಆಲಿಯಾ ಭಟ್ ಇದೆ ಮೊದಲ ಬಾರಿಗೆ ಜತೆಯಾಗಿ ನಟಿಸಲಿದ್ದಾರೆ.
ಈ ಚಿತ್ರವನ್ನು ಅವರು ರಿತೇಶ್ ಸಿದ್ವಾನಿ ಜತೆಗೆ ಎಕ್ಸೆಲ್ ಎಂಟರ್ಟೈನ್ವೆುಂಟ್ ಸಂಸ್ಥೆಯಡಿ ನಿರ್ವಿುಸುತ್ತಿದ್ದಾರೆ. ಈ ಹಿಂದೆ, ‘ದಿಲ್ ಚಾಹ್ತಾ ಹೈ’ ಮತ್ತು ‘ಜಿಂದಗಿ ನಾ ಮಿಲೇಗಿ ದೋಬಾರಾ’ ಚಿತ್ರಗಳು ಇದೇ ಎಕ್ಸೆಲ್ ಸಂಸ್ಥೆಯಿಂದ ಹೊರಬಂದಿದ್ದವು. ಸುತ್ತಾಟ, ಜೀವನ ಪ್ರೀತಿ, ಗೆಳೆತನ … ಹೀಗೆ ಹಲವು ಅಂಶಗಳು ಸಿನಿಮಾದಲ್ಲಿದ್ದವು. ಇದೀಗ ‘ಜೀ ಲೇ ಜರಾ’ ಚಿತ್ರದಲ್ಲಿಯೂ ಮೂವರು ಯುವತಿಯರ ಜೀವನವನ್ನು ತೆರೆಮೇಲೆ ಕಣ್ತುಂಬಿಕೊಳ್ಳಬಹುದಂತೆ.
ಜೋಯಾ ಅಖ್ತರ್, ಫರ್ಹಾನ್ ಅಖ್ತರ್, ರೀಮಾ ಕಾಗ್ತಿ ಚಿತ್ರಕಥೆ ಬರೆದಿರುವ ಈ ಚಿತ್ರ 2022ಕ್ಕೆ ಶೂಟಿಂಗ್ ಆರಂಭಿಸಲಿದ್ದು, 2023ರಲ್ಲಿ ತೆರೆಗೆ ಬರಲಿದೆಯಂತೆ.