ಬರೀ ವಿವಾದಗಳನ್ನೇ ಸೃಷ್ಟಿಸಿ ಸುದ್ದಿಯಾಗುತ್ತಿರುವ ಮುಸ್ಕಾನ್ ಜಟ್ಟನಾ ಈ ಬಾರಿ ಬಿಗ್ ಬಾಸ್ ಸ್ಪರ್ಧಿ!
Thursday, August 12, 2021
ಮುಂಬೈ: ಯಾವಾಗಲೂ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಬಹಳ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಈ ಬಾರಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಭಾನುವಾರ ನಿರ್ಮಾಪಕ ಕರಣ್ ಜೋಹರ್ ಈ ಶೋವನ್ನು ಅದ್ಧೂರಿಯಾಗಿ ಆರಂಭಿಸಿದ್ದಾರೆ.
ವಿಶೇಷವೆಂದರೆ ಬರೀ ವಿವಾದಗಳನ್ನೇ ಸೃಷ್ಟಿಸಿ ಸುದ್ದಿಯಾಗುತ್ತಿದ್ದ ಟಿಕ್‌ಟಾಕ್- ಇನ್‌ಸ್ಟಾಗ್ರಾಂ ಸ್ಟಾರ್ ಮುಸ್ಕಾನ್ ಜಟ್ಟನಾ ಈ ಬಾರಿ ಮನೆಯೊಳಗಡೆ ಇದ್ದಾರೆ. ಆದ್ದರಿಂದ ಕೇಳೋದೇ ಬೇಡ ಬಿಗ್‌ಬಾಸ್ ಮನೆಯಲ್ಲಿರೋ ಕಾಂಟ್ರವರ್ಶಿಯಲ್ ಪರ್ಸನ್ ಯಾರೆಂದರೆ ಈಕೆಯೇ ಎಂದು ಯಾರೂ ಬೇಕಾದರೂ ಹೇಳಬಹುದು.
ಮುಸ್ಕಾನ್ ಜಟ್ಟನಾ ದೊಡ್ಮನೆಗೆ ಎಂಟ್ರಿ ಕೊಟ್ಟಿರೋ ಅತ್ಯಂತ ಕಿರಿಯ ಸ್ಪರ್ಧಿಯೂ ಹೌದು. ಮೂಸ್ ಜಟ್ಟನಾ ಎಂದೇ ಫೇಮಸ್ ಆಗಿರೋ ಈಕೆಯ ಹೆಸರು ಮುಸ್ಕಾನ್ ಜಟ್ಟನಾ. ಈಕೆ ಸೋಷಿಯಲ್ ಮೀಡಿಯಾ ಇನ್ಸಫುಯೆನ್ಸರ್ ಕೂಡಾ ಹೌದು. ಈ ಬಾರಿಯ ಶೋದಲ್ಲಿ ಈಗಾಗಲೇ 13 ಜನ ಸ್ಪರ್ಧಿಗಳನ್ನು ರಿವೀಲ್ ಮಾಡಲಾಗಿದೆ. ಆದರೆ ಅತೀ ಹೆಚ್ಚು ಚರ್ಚೆಯಲ್ಲಿರೋ ಅಭ್ಯರ್ಥಿಗಳೆಂದರೆ ಮುಸ್ಕಾನ್ ಜಟ್ಟನ ಮತ್ತು ಶಮಿತಾ ಶೆಟ್ಟಿ. ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಅವರ ನಡೆಯುತ್ತಿರೋ ವಿವಾದದ ಮಧ್ಯೆಯೇ ಶಮಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದಾರೆ. ಹಾಗಾಗಿಯೇ ಸದ್ಯ ಶೋನಲ್ಲಿ ಇವರೂ ವಿವಾದಿತ ಸ್ಪರ್ಧಿಯಾಗಿದ್ದಾರೆ.