
ವಿಮಾನದಿಂದ ಕೆಳಗೆ ಬಿದ್ದು ಸತ್ತವರ ಗುರುತು ಪತ್ತೆ..ಅಂದು ಅಲ್ಲಿ ನಡೆದದ್ದೇನು ಎಂದು ಭಯಾನಕ ಕಥೆ ಬಿಚ್ಚಿಟ್ಟ...
ನವದೆಹಲಿ: ತಾಲಿಬಾನಿಗಳು ಕಾಬುಲ್ ವಶಕ್ಕೆ ಪಡೆಯುತ್ತಿದ್ದಂತೆ ದೇಶದಿಂದಲೇ ಪರಾರಿ ಆಗಲು ಆಫ್ಘಾನ್ ಜನರು ಯತ್ನಿಸಿದರು. ಕಾಬುಲ್ ಏರ್ಪೋರ್ಟ್ ಬಳಿ ಜಮಾಸಿದ ಜನರು ಬಸ್ಗಳಲ್ಲಿ ಜನ ತುಂಬುವಂತೆ ವಿಮಾನವನ್ನು ಏರಿ ಹೋಗುವಾಗ ಇಬ್ಬರು ಆಫ್ಘಾನ್ನರು ಮೇಲಿಂದ ಕೆಳಗೆ ಬಿದ್ದು ಸಾವಿಗೀಡಾದರು. ಅವರು ಬಿದ್ದಿದ್ದು ವಾಲಿ ಸಲೇಕ್ ಅವರ ಮನೆಯ ಮೇಲೆ. ತಕ್ಷಣ ವಾಲಿ ಮಹಡಿಯ ಮೇಲೆ ನೋಡಿದ್ದಾರೆ. ಈ ವೇಳೆ ರಕ್ತಸಿಕ್ತ ಸ್ಥಿತಿಯಲ್ಲಿ ಇಬ್ಬರ ಮೃತದೇಹವನ್ನು ನೋಡಿ ಶಾಕ್ ಆಗಿದ್ದಾರೆ.
49 ವರ್ಷದ ವಾಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಆ ದೃಶ್ಯವನ್ನು ವಾಲಿ ಪತ್ನಿ ನೋಡಿ ಅಲ್ಲಿಯೇ ಮೂರ್ಛೆ ಹೋದರಂತೆ. ಕಾಬುಲ್ ಅನ್ನು ತಾಲಿಬಾನಿಗಳು ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ದೇಶ ತೊರೆಯುವ ಆತುರದಲ್ಲಿ ವಿಮಾನದಿಂದ ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಎಂದು ಹೇಳಿದಾಗಲೇ ಅಲ್ಲಿ ಏನು ನಡೆದಿದೆ ಎಂಬುದು ವಾಲಿಗೆ ಗೊತ್ತಾಗಿದೆ.
ನಾನು ಶಾಲು ಮತ್ತು ಸ್ಕಾರ್ಫ್ ತೆಗೆದುಕೊಂಡು ಶವಗಳನ್ನು ಮುಚ್ಚಿದೆ. ಒಬ್ಬನ ಜೇಬಿನಲ್ಲಿ ಜನನ ಪ್ರಮಾಣ ಪತ್ರವಿತ್ತು. ಅದರ ಪ್ರಕಾರ ಆತನ ಹೆಸರು ಸಫಿವುಲ್ಲಾ ಹೊಟಕ್. ಆತ ವೈದ್ಯನಾಗಿದ್ದ. ಇನ್ನೊಬ್ಬನ ಹೆಸರು ಫಿದಾ ಮೊಹಮ್ಮದ್. ಇಬ್ಬರು ಕೂಡ 30 ವರ್ಷ ಒಳಗಿನ ವಯಸ್ಸಿನವರು ಎಂದು ಸಾಲೆಕ್ ಹೇಳಿದ್ದಾರೆ.