
ತನ್ನ ಜೀವನದ ಕಹಿ ಘಟನೆಗಳನ್ನು ಬಿಚ್ಚಿಟ್ಟ ಬಿಗ್ ಬಾಸ್ ಸ್ಪರ್ಧಿ....
Friday, August 20, 2021
ಮುಂಬೈ: ಬಿಗ್ ಬಾಸ್ ಹಿಂದಿ ಓಟಿಟಿಯಲ್ಲಿ ಭಾಗವಹಿಸಿದ್ದ ಉರ್ಫಿ ಜಾವೇದ್ ಮನೆಯಿಂದ ಔಟ್ ಆಗಿದ್ದಾರೆ. ಆ ನಂತರದಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಅಶ್ಲೀಲ ವೆಬ್‌ಸೈಟ್‌ನಲ್ಲಿ ಫೋಟೋಗಳು ಅಪ್‌ಲೋಡ್ ಆದಾಗ ಕುಟುಂಬವೇ ಸಹಕಾರ ನೀಡಲಿಲ್ಲ, ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿತು ಎಂದು ನಟಿಜೀವನದ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿದ ಉರ್ಫಿ "ನಾನು 12ನೇ ತರಗತಿಯಲ್ಲಿದ್ದೆ. ನನಗೆ ಆಗ ಕುಟುಂಬದ ಬೆಂಬಲ ಕೂಡ ಇರಲಿಲ್ಲ. ನನ್ನ ಕುಟುಂಬವೇ ನನ್ನನ್ನು ದೂಷಿಸಿತು. ಅವರೆಲ್ಲ ನನ್ನ ಬ್ಯಾಂಕ್ ಅಕೌಂಟ್ ಚೆಕ್ ಮಾಡಲು ಬಯಸಿದ್ದರು. ನನ್ನ ತಂದೆ ದೈಹಿಕವಾಗಿ, ಮಾನಸಿಕವಾಗಿ ನನಗೆ ಕಿರುಕುಳ ನೀಡಿದ್ದರು. ನನ್ನ ಬಗ್ಗೆ ಜನರು ಏನೇನೋ ಮಾತನಾಡುತ್ತಿದ್ದರು, ಆಗ ನನ್ನ ನಿಜವಾದ ಹೆಸರನ್ನೇ ನನಗೆ ನೆನಪಿಟ್ಟುಕೊಳ್ಳಲಾಗುತ್ತಿರಲಿಲ್ಲ. ನಾನು ಅನುಭವಿಸಿದ್ದನ್ನು ಇನ್ನೊಂದು ಹುಡುಗಿ ಅನುಭವಿಸಬಾರದು" ಎಂದು ಹೇಳಿದ್ದಾರೆ.
ಇವೆಲ್ಲ ನಡೆದಮೇಲೆ ಉರ್ಫಿಗೆ ತನ್ನ ಧ್ವನಿಯನ್ನು ತಾನೇ ಎತ್ತಬೇಕು ಎಂದು ಅರಿವಾಯ್ತು. ಆ ಬಗ್ಗೆ ಮಾತನಾಡಿರುವ ಅವರು "ನನ್ನ ತಂದೆಯೇ ನನ್ನನ್ನು ದೂಷಿಸಿದಾಗ ನನಗೆ ಏನೂ ಹೇಳಲಾಗುತ್ತಿರಲಿಲ್ಲ. ಅವರು ನೀಡುತ್ತಿದ್ದ ಹಿಂಸೆಯನ್ನು ತಡೆದುಕೊಳ್ಳಬೇಕಿತ್ತು. ನಾನು ಮನೆಬಿಟ್ಟು ಬಂದಾಗ ಜೀವನ ಮಾಡಲು ತುಂಬ ಕಷ್ಟಪಟ್ಟೆ. ನನ್ನ ವ್ಯಕ್ತಿತ್ವ ಈಗ ಹೊರಗೆ ಬರುತ್ತಿದ್ದು, ತಡೆಯೋದಿಲ್ಲ" ಎಂದು ಹೇಳಿದ್ದಾರೆ.