
ಆಕೆಗೆ 17 ವರ್ಷ , ಈತನಿಗೆ 35 ವರ್ಷ ... ಲಾಡ್ಜ್ ನಲ್ಲಿ ನಡೆದದ್ದನ್ನು ಕಂಡು ಬೆಚ್ಚಿಬಿದ್ದ ಸಿಬ್ಬಂದಿ...love
Friday, August 20, 2021
ಆಂಧ್ರಪ್ರದೇಶ: ನೆಲ್ಲೂರು ಜಿಲ್ಲೆಯ ಬುಚಿರೆಡ್ಡಿಪಾಲೆಂ ಗ್ರಾಮದ ರಾಮಯ್ಯ ಎಂಬ ವ್ಯಕ್ತಿ ತನ್ನ 17 ವರ್ಷದ ಸೋದರ ಸೊಸೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಅತ್ತ ಮನೆಯವರು ಆಕೆಗಾಗಿ ವಿವಾಹ ಸಂಬಂಧ ಹುಡುಕುತ್ತಿದ್ದರು. ಆದರೆ ರಾಮಯ್ಯಗೆ ಅದಾಗಲೇ ಮದುವೆ ಆಗಿದ್ದರಿಂದ ಹೆಣ್ಣು ಕೇಳಲು ದೈರ್ಯವಿರಲಿಲ್ಲ.
ಇಬ್ಬರು ಬುಚಿರೆಡ್ಡಿಪಾಲೆಂನ ಲಾಡ್ಜ್ವೊಂದಕ್ಕೆ ತೆರಳಿದ್ದರು. ಲಾಡ್ಜ್ ಸಿಬ್ಬಂದಿ ತಂದೆ ಮಗಳೆಂದು ರೂಮ್ ನೀಡಿದ್ದರು. ಈ ಜೋಡಿ ಲಾಡ್ಜ್ ರೂಮ್ನಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಅದರಂತೆ ಬರುವಾಗಲೇ ತಂದಿದ್ದ ಕೀಟನಾಶಕವನ್ನು ಸೇವಿಸಿದ್ದಾರೆ. ಇತ್ತ ಆತ್ಮಹತ್ಯೆಯ ವಿಚಾರ ತಿಳಿದು ಕುಟುಂಬಸ್ಥರು ಲಾಡ್ಜ್ಗೆ ಆಗಮಿಸಿದ್ದರು. ಈ ವೇಳೆ ಲಾಡ್ಜ್ ಸಿಬ್ಬಂದಿ ಬಾಗಿಲನ್ನು ಹೊಡೆದಾಗ ಇಬ್ಬರೂ ನೆಲದಲ್ಲಿ ಬಿದ್ದು ಪ್ರಾಣ ಉಳಿಸುವಂತೆ ಹಾತೊರೆಯುತ್ತಿದ್ದರು. ಕೂಡಲೇ ಇಬ್ಬರನ್ನು ಹತ್ತಿರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಹುಡುಗಿಯ ಕುಟುಂಬಸ್ಥರು ರಾಮಯ್ಯ ವಿರುದ್ದ ದೂರು ನೀಡಿದ್ದಾರೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.