Video: ಮಾನವ ಸರಪಳಿ ನಿರ್ಮಿಸಿ ಬಾಲಕಿಯರನ್ನು ರಕ್ಷಿಸಿದ ಯುವಕರು... ವಿಡಿಯೋ ಎಲ್ಲೆಡೆ ವೈರಲ್....
Thursday, August 26, 2021
ಬೀಜಿಂಗ್: ಬೆಂಕಿ ಕಾಣಿಸಿಕೊಂಡಿರುವ ಕಟ್ಟಡದಿಂದ ಮಾನವ ಸರಪಳಿ ನಿರ್ಮಿಸಿ ಇಬ್ಬರು ಬಾಲಕಿಯರನ್ನು ಯುವಕರು ರಕ್ಷಿಸಿರುವ ಘಟನೆ ಚೀನಾದ ಕ್ಸಿಂಟಿಯನ್‌ನಲ್ಲಿ ನಡೆದಿದೆ.
https://www.facebook.com/trendinginchina/videos/142981944592748/
ಆರು ಮಂದಿ ಯುವಕರ ಈ ಸಾಹಸಕ್ಕೆ ಎಲ್ಲೇಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚೀನಾದ ಕ್ಸಿಂಟಿಯನ್ ಇಲ್ಲಿಯ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಇಬ್ಬರು ಬಾಲಕಿಯರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿದ ಕೆಲ ಯುವಕರು ಒಬ್ಬರ ಮೇಲೆ ಒಬ್ಬರಂತೆ ಚೈನ್ ತರ ನಿಂತು ಬೆಂಕಿ ಕಾಣಿಸಿಕೊಂಡ ಕಟ್ಟಡದಿಂದ ಬಾಲಕಿಯನ್ನು ಹೊರಗೆ ಎಳೆದು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಬಾಲಕಿಯರನ್ನು ರಕ್ಷಿಸುತ್ತಿರುವ ವೀಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಅದೀಗ ಭಾರೀವೈರಲ್ ಆಗಿದೆ.