ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಆನ್‌ಲೈನ್‌ನಲ್ಲಿ ನಾಯಿ ಖರೀದಿಸಲು ಹೋಗಿ 66 ಲಕ್ಷ ರೂಪಾಯಿಗಳು ಕಳೆದುಕೊಂಡ ಮಹಿಳೆ..!!

 ಬೆಂಗಳೂರು: ಆನ್‌ಲೈನ್‌ನಲ್ಲಿ ಗೋಲ್ಡನ್​ ರಿಟ್ರೈವರ್​ ತಳಿಯ ನಾಯಿ ಖರೀದಿಸಲು ಹೋಗಿ ಮಹಿಳೆಯೊಬ್ಬರು ಬರೋಬ್ಬರಿ 66 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಡೆಹ್ರಾಡೂನ್​​ ಮೂಲದ 50 ವರ್ಷದ ಮಹಿಳೆ ಮೋಸ ಹೋಗಿದ್ದು ಈ ಬಗ್ಗೆ ಸದ್ಯ ಇವರು ಪೊಲೀಸರಿಗೆ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಉತ್ತರಾಖಂಡ್​ ಪೊಲೀಸರು ಡಿಂಗ್​ ಬೋಗ್ಬಾ ಕ್ಲಾವ್ಸ್​ ಅಲಿಯಾಸ್​ ಬಾಬಿ ಇಬ್ರಾಹಿಂನನ್ನು ಬಂಧಿಸಿದ್ದಾರೆ. ಮಗಳಿಗೆ ಜನ್ಮದಿನದಂದು ಉಡುಗೊರೆ ರೂಪದಲ್ಲಿ 15 ಸಾವಿರ ರೂ. ಮೌಲ್ಯದ ಶ್ವಾನವನ್ನು ಖರೀದಿಸಬೇಕೆಂದುಕೊಂಡಿದ್ದರು ಆಗ ಅಲ್ಲಿ ಪರಿಚಯವಾಗಿದ್ದು, ಬಾಬಿ ಇಬ್ರಾಹಿಂ, 

ಈತ ಉತ್ತಮ ತಳಿಯ ನಾಯಿ ಕೊಡುವುದಾಗಿ ಹೇಳಿ  ಸ್ವಲ್ಪ ಸ್ವಲ್ಪ ಹಣ ಪಡೆದುಕೊಂಡು 66 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾನೆ. 66 ಲಕ್ಷ ರೂ. ಕಳೆದುಕೊಂಡ ಮೇಲೆ ಮಹಿಳೆಗೆ ತಾವು ಮೋಸ ಹೋಗಿರುವುದು ತಿಳಿದಿದೆ. ನಂತರ ಅವರು ದೂರು ದಾಖಲು ಮಾಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಹಲವಾರು ಮೊಬೈಲ್ ಫೋನ್​, ಲ್ಯಾಪ್​ಟಾಪ್​, ಎಟಿಎಂ ಕಾರ್ಡ್​ಗಳನ್ನು ವಶಕ್ಕೆ ಪಡೆಯಲಾಗಿದೆ.   
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW