ನರ್ಸ್ ಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಮುಖ್ಯೋಪಾಧ್ಯಾಯ ಅಮಾನತು...
Saturday, August 7, 2021
ಚನ್ನಮ್ಮನ ಕಿತ್ತೂರು: ಸರಕಾರಿ ಆಸ್ಪತ್ರೆಯ ನರ್ಸ್ ಗೆ ಅಶ್ಲೀಲ ಮೆಸೇಜ್ ಕಳುಹಿಸಿ ಮಾನಸಿಕ ಕಿರಕುಳ ನೀಡುತ್ತಿದ್ದ ಮುಖ್ಯೋಪಾಧ್ಯಾಯನನ್ನು ಅಮಾನತುಗೊಳಿಸಲಾಗಿದೆ.
ದೇಗಾಂವ ಶಾಲೆಯ ಮುಖ್ಯಾಧ್ಯಾಪಕ ಸುರೇಶ ಚವಲಗಿ ಅವರನ್ನು ಅಮಾನತು ಮಾಡಲು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ.ಪುಂಡಲೀಕ ಆದೇಶ ಹೊರಡಿಸಿದ್ದಾರೆ. ಸುರೇಶ ಚವಲಗಿ ತಮಗೆ ವಾಟ್ಸ್ ಆ್ಯಪ್ ನಲ್ಲಿ ಅಶ್ಲೀಲ ಮೆಸೇಜ್ ಕಳುಹಿಸಿ ಮಾನಸಿಕ ಕಿರಕುಳ ನೀಡುತ್ತಿದ್ದಾರೆಂದು ತಾಲೂಕಿನ ಸರಕಾರಿ ಆಸ್ಪತ್ರೆಯ ನರ್ಸ್ ಒಬ್ಬರು ತಮ್ಮ ಸಂಬಂಧಿಕರಿಗೆ ಮತ್ತು ಗ್ರಾಮಸ್ಥರಿಗೆ ತಿಳಿಸಿದ್ದರು.
ಈ ಹಿನ್ನೆಲೆ ಗ್ರಾಮದ ಶಾಲೆಯಲ್ಲಿ ಬುಧವಾರ ಗ್ರಾಮಸ್ಥರು ಮುಖ್ಯಾಧ್ಯಾಪಕನಿಗೆ ಧರ್ಮದೇಟು ನೀಡಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.