'ಪೊನ್ನಿಯನ್ ಸೇಲ್ವನ್’ ಸಿನಿಮಾ ನಾಯಕಿ ಐಶ್ವರ್ಯಾ ರೈ ಲುಕ್ ಸೋರಿಕೆ..
Wednesday, August 25, 2021
ಕೆಲ ದಿನಗಳಿಂದ ಸತತವಾಗಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯನ್ ಸೇಲ್ವನ್’ ಸಿನಿಮಾ ತಂಡ ಶೂಟಿಂಗ್ ಮಾಡುತ್ತಿದೆ. ಇದೀಗ ಶೂಟಿಂಗ್ ಸೆಟ್ನಿಂದ ಚಿತ್ರದ ನಾಯಕಿ ಐಶ್ವರ್ಯಾ ರೈ ಅವರ ಲುಕ್ ಸೋರಿಕೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
‘ಪೊನ್ನಿಯನ್ ಸೇಲ್ವನ್’ ಸಿನಿಮಾದಲ್ಲಿ ಐಶ್ವರ್ಯಾಗೆ ಎರಡು ಶೇಡ್ಗಳಿವೆ ಎಂಬುದು ಈ ಹಿಂದೆಯೇ ಸುದ್ದಿಯಾಗಿತ್ತು. ನಂದಿನಿ ಮತ್ತು ಮಂದಾಕಿನಿ ದೇವಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ ಮಂದಾಕಿನಿ ದೇವಿಯ ಅವತಾರದ ಫೋಟೋ ಹೊರಬಿದ್ದಿದೆ.
ಸಿನಿಮಾ ಘೋಷಣೆ ಆದಾಗಿನಿಂದ ಐಶ್ವರ್ಯಾ ಲುಕ್ ಬಗ್ಗೆ ಚಿತ್ರತಂಡ ಗೌಪ್ಯತೆಯನ್ನು ಕಾಯ್ದುಕೊಂಡೇ ಬಂದಿತ್ತು. ಸಣ್ಣ ಸುಳಿವನ್ನೂ ಕೂಡ ನೀಡಿರಲಿಲ್ಲ. ಇದೀಗ ಸೋರಿಕೆ ಆಗಿರುವ ಫೋಟೋ ಹಲವು ಪ್ರಶ್ನೆ ಮತ್ತು ಕುತೂಹಲಗಳಿಗೆ ಉತ್ತರವಾಗಿದೆ.