
ಗುಪ್ತಾಂಗಕ್ಕೆ ಗಮ್ ಅಂಟಿಸಿ ಪ್ರೇಯಸಿ ಜೊತೆಗೆ ಸಂಭೋಗ: ಮುಂದಾಗಿದ್ದೇ ದುರಂತ
ಗುಜರಾತ್: ಪ್ರೇಯಸಿ ಗರ್ಭಿಣಿಯಾಗುವುದನ್ನು ತಡೆಯಲೆಂದು ಪ್ರಿಯಕರ ತನ್ನ ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡು ಸಂಭೋಗ ನಡೆಸಿ ಮೃತಪಟ್ಟಿರುವ ವಿಚಿತ್ರ ಘಟನೆಯೊಂದು ಗುಜರಾತಿನ ಅಹಮದಾಬಾದ್ನಲ್ಲಿ ನಡೆದಿದೆ.
ಫತೇಹವಾಡಿ ಏರಿಯಾದ ಸಲ್ಮಾನ್ ಮಿರ್ಜಾ (25) ಮೃತಪಟ್ಟ ಯುವಕ. ಈತ ತನ್ನ ಪ್ರೇಯಸಿಯೊಂದಿಗೆ ಜೂನ್ 22ರಂದು ಜುಹಾಪುರಾದ ಏರಿಯಾದಲ್ಲಿರುವ ಹೋಟೆಲ್ ಗೆ ತೆರಳಿದ್ದಾನೆ. ಡ್ರಗ್ಸ್ ವ್ಯಸನಿಯಾಗಿದ್ದ ಇಬ್ಬರು ಅದೇ ಅಮಲಿನಲ್ಲಿ ದೈಹಿಕ ಸಂಪರ್ಕ ನಡೆಸಲು ಬಯಸಿದ್ದರು. ಆದರೆ, ಕಾಂಡೋಮ್ ಇರದ ಪರಿಣಾಮ ಸಲ್ಮಾನ್ ಮಿರ್ಜಾ ತನ್ನ ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡು ಸಂಭೋಗ ನಡೆಸಿದ್ದಾನೆ.
ಆದರೆ ಮರುದಿನ ಬೆಳಗ್ಗೆ ಮಿರ್ಜಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಪೂರ್ತಿ ಆರೋಗ್ಯ ಹದಗೆಟ್ಟಿತ್ತು. ಗಾಬರಿಗೊಂಡ ಆತನ ಗರ್ಲ್ಫ್ರೆಂಡ್ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
ಈ ಬಗ್ಗೆ ಆತನ ಸಂಬಂಧಿ ಜೂನ್ 25ರಂದು ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಳಿಕ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಎದುರು ನೋಡುತ್ತಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡಿದ್ದರಿಂದ ಆತ ಮೃತಪಟ್ಟಿದ್ದಾನೆಂದು ಹೇಳಲಾಗಿದೆ.