ಬಿಗ್ ಬಾಸ್ ನಲ್ಲಿ ಟಾಸ್ಕ್ ಗಾಗಿ ನೈತಿಕತೆಯನ್ನೂ ಬದಿಗಿಟ್ಟು ಮಹಿಳಾ ಸ್ಪರ್ಧಿಯ ತುಟಿಗೆ ಮುತ್ತಿಟ್ಟ ಗಾಯಕಿ!
Sunday, August 15, 2021
ಮುಂಬೈ: ಕರಣ್ ಜೋಹರ್ ನಡೆಸಿಕೊಡುತ್ತಿರುವ ಒಟಿಟಿಯಲ್ಲಿ ಮಾತ್ರ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ಸೆನ್ಸಾರ್ನ ಹಂಗಿಲ್ಲದೇ ಸಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಗ್ ಬಾಸ್ ಓಟಿಟಿ ಶೋ ಸ್ವಲ್ಪ ಹಾಟ್ ಆಗಿರಲಿದೆ ಎಂದು ಈ ಮೊದಲು ಬಿಡುಗಡೆಯಾದ ಪ್ರೋಮೋದಲ್ಲಿಯೇ ಸ್ಪಷ್ಟಪಡಿಸಲಾಗಿತ್ತು. ಅದೇ ಮಾತಿನಂತೆ ಇದೀಗ ಸಾಕಷ್ಟು ಬೋಲ್ಡ್ ವಿಚಾರಗಳಿಂದ ಈ ಶೋ ಸದ್ದು ಮಾಡುತ್ತಿದ್ದೆ. ಇತ್ತೀಚಿನ ಎಪಿಸೋಡ್ನಲ್ಲಿ ಒಂದೇ ಒಂದು ಸಣ್ಣ ಟಾಸ್ಕ್ ಗೆಲ್ಲುವ ಸಲುವಾಗಿ ಗಾಯಕಿ ನೇಹಾ ಭಾಸೀನ್ ಅವರು ನಟಿ ರಿಧಿಮಾ ಪಂಡಿತ್ ತುಟಿ ತುಟಿ ಇಟ್ಟು ಮುತ್ತಿಟ್ಟಿದ್ದಾರೆ.
ಇತ್ತೀಚಿನ ಒಂದು ಟಾಸ್ಕ್ ನಲ್ಲಿ ಬಿಗ್ ಬಾಸ್ ಓಟಿಟಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಾಗಿಸಲಾಗಿತ್ತು. ಒಂದು ಟೀಮ್ನವರು ಸ್ಟಾಚ್ಯೂ ರೀತಿ ನಿಂತುಕೊಳ್ಳಬೇಕಿತ್ತು. ಇನ್ನೊಂದು ತಂಡ ಹಾಗೆ ನಿಂತವರ ಏಕಾಗ್ರತೆಯನ್ನು ಭಂಗಗೊಳಿಸಿ ಅವರು ಅಲ್ಲಾಡುವಂತೆ ಮಾಡಬೇಕು. ಈ ವೇಳೆ ಸ್ಪರ್ಧಿಗಳು ಅನೇಕ ಕಸರತ್ತುಗಳನ್ನು ಮಾಡಿದ್ದಾರೆ. ನಟಿ ರಿಧಿಮಾ ಪಂಡಿತ್ ಏಕಾಗ್ರತೆಯನ್ನು ಕೆಡಿಸಲು ನೇಹಾ ಭಾಸೀನ್ ಪ್ರಯತ್ನ ಪಟ್ಟರು. ಎಷ್ಟೇ ಪ್ರಯತ್ನಿಸಿದರೂ ರಿಧಿಮಾ ಪಂಡಿತ್ ಅಲ್ಲಿಂದ ಕದಡಲಿಲ್ಲ. ಆಗ ನೇಹಾ ಸ್ಟ್ಯಾಚು ಆಗಿ ನಿಂತಿದ್ದ ರಿಧಿಮಾ ತುಟಿಗೆ ತುಟಿ ಸೇರಿಸಿ ಮುತ್ತಿಟ್ಟಿದ್ದಾರೆ. ಒಬ್ಬರ ಸಮ್ಮತಿ ಇಲ್ಲದೆ ಈ ರೀತಿ ಕಿಸ್ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಬಿಗ್ ಬಾಸ್ ಓಟಿಟಿ ವೀಕ್ಷಕರ ವಲಯದಲ್ಲಿ ಕೇಳಿಬರುತ್ತಿದೆ. ನೇಹಾ ಹೀಗೆ ನೈತಿಕತೆಯ ಗಡಿ ಮೀರಿ ಕಿಸ್ ಮಾಡಿದರೂ ಕೂಡ ರಿಧಿಮಾ ಅವರನ್ನು ಸೋಲಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂಬುದು ಬೇರೆ ಮಾತು. ಆದರೆ ಟಾಸ್ಕ್ ಗಾಗಿ ನೇಹಾ ಅವರು ನೈತಿಕತೆಯನ್ನೂ ಬದಿಗಿಟ್ಟರು ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ.
ಕೇವಲ ಆರು ವಾರಗಳ ಕಾಲ ನಡೆಯಲಿರುವ ‘ಬಿಗ್ ಬಾಸ್ ಓಟಿಟಿ’ ಶೋ ವೂಟ್ನಲ್ಲಿ ಮಾತ್ರ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮ ತುಂಬ ವಿವಾದಾತ್ಮಕವಾಗಿದ್ದು, ಹಲವು ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದಾರೆ. ಬಳಿಕ ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್ ಹಿಂದಿ ಸೀಸನ್ 15’ ಆರಂಭ ಆಗಲಿದೆ. ಅಲ್ಲಿಯವರೆಗೂ ಕರಣ್ ಜೋಹರ್ ಅವರು ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಾರೆ.