-->

ಭಾರತದಲ್ಲಿ ಪ್ರೀತಿ ಮೊಳೆತ ಅಫ್ಘಾನಿಸ್ತಾನದ ಯುವತಿ, ಫ್ರಾನ್ಸ್ ಯುವಕನ ಪ್ರೀತಿಗೆ ಹೈಕೋರ್ಟ್ ಅಸ್ತು

ಭಾರತದಲ್ಲಿ ಪ್ರೀತಿ ಮೊಳೆತ ಅಫ್ಘಾನಿಸ್ತಾನದ ಯುವತಿ, ಫ್ರಾನ್ಸ್ ಯುವಕನ ಪ್ರೀತಿಗೆ ಹೈಕೋರ್ಟ್ ಅಸ್ತು

ನವದೆಹಲಿ: ವೈದ್ಯಕೀಯ ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದ ಅಫ್ಘಾನಿಸ್ತಾನದ ಯುವತಿ ಹಾಗೂ ಫ್ರಾನ್ಸ್​ನ ಯುವಕ ಜೋಡಿಯೊಂದು ಆಸ್ಪತ್ರೆಯಲ್ಲಿ ಅಚನಕ್ಕಾಗಿ ಭೇಟಿಯಾಗಿದೆ. ಈ ಪರಿಚಯ ಹಾಗೆಯೇ ಮುಂದುವರಿದು ಇಬ್ಬರ ನಡುವೆ ಪ್ರೀತಿ ಚಿಗುರಿದೆ‌. ಕೊನೆಗೆ ಜೋಸಿ ಭಾರತದಲ್ಲಿಯೇ ಮದುವೆಯಾಗಿದೆ. ಆದರೆ ಕಾನೂನು ತೊಡಕಿನಿಂದ ಒಂದಷ್ಟು ಸಂಕಷ್ಟಕ್ಕೆ ಸಿಲುಕಿದ್ದ ಜೋಡಿಯ ಲವ್​ ಸ್ಟೋರಿಗೆ ಹೈಕೋರ್ಟ್​ ಸುಖಾಂತ್ಯವಾಗಿ ಇತಿಶ್ರೀ ಹಾಡಿದೆ.

ದೆಹಲಿಯ ಮಸೀದಿವೊಂದರಲ್ಲಿ ವಿವಾಹವಾಗಿದ್ದ ಜೋಡಿಗೆ ದುರದೃಷ್ಟವಶಾತ್​ ಇವರು ವಾಪಸ್​ ಹೋಗಲು ಕಾನೂನು ಅಡಚಣೆ ಉಂಟಾಗಿದೆ. ಏಕೆಂದರೆ ಆ ವೇಳೆಗಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದ್ದು, ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ನೂತನ ಜೋಡಿ ಫ್ರಾನ್ಸ್​ಗೆ ಹೋಗಲು ಬಯಸಿದ್ದರು. ಆದರೆ ಅಫ್ಘಾನಿಸ್ತಾನ ಮೂಲದ ಪತ್ನಿಯ ವೀಸಾಕ್ಕಾಗಿ ಫ್ರೆಂಚ್​​ ರಾಯಭಾರ ಕಚೇರಿಗೆ ತೆರಳಿದಾಗ, ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡದೇ ವೀಸಾ ನೀಡಲು ಸಾಧ್ಯವಿಲ್ಲ ಎಂದು ಅಲ್ಲಿ ತಿಳಿಸಲಾಯಿತು.

ಭಾರತದಲ್ಲಿ ಮದುವೆಯಾಗಿರುವ ಕಾರಣ, ಈ ಜೋಡಿ ವಿವಾಹ ನೋಂದಣಿಗಾಗಿ ದೆಹಲಿ ಸರ್ಕಾರದ ವೆಬ್​ಸೈಟ್​​ಗೆ ಮೊರೆ ಹೋಗಿದ್ದಾರೆ. ಅಲ್ಲೂ ಕಡ್ಡಾಯವಾಗಿ ಆಧಾರ್​ ಕಾರ್ಡ್​​ ಮತ್ತು ವೋಟಿಂಗ್ ಕಾರ್ಡ್ ಬೇಕೆಂಬ ತೊಡಕು ಉಂಟಾಗಿತ್ತು. ಆದ್ದರಿಂದ ಜೋಡಿ ದೆಹಲಿಯ ಪ್ರಸಿದ್ಧ ವಕೀಲ ದಿವ್ಯಾಂಶು ಪಾಂಡೆ ಎಂಬ ವಕೀಲರನ್ನು ಭೇಟಿಯಾಯಿತು. ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲು ಸಲಹೆ ನೀಡಿದರು. ಬಳಿಕ ಅರ್ಜಿ ಸಲ್ಲಿಸಿದ ಅವರು ಸಂವಿಧಾನದ 14ನೇ ಪರಿಚ್ಛೇದ ಉಲ್ಲೇಖ ಮಾಡಿ, ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡುವಂತೆ ಕೋರಿದ್ದಾರೆ. ವಾದ ಆಲಿಸಿದ ಹೈಕೋರ್ಟ್​ ಈ ಬಗ್ಗೆ ದೆಹಲಿ ಸರ್ಕಾರಕ್ಕೆ ನೋಟಿಸ್ ನೀಡುವ ಮೂಲಕ ಪ್ರತಿಕ್ರಿಯೆ ಕೇಳಿದೆ. 

ಇದಕ್ಕೆ ದೆಹಲಿ ಸರ್ಕಾರ ಸಮ್ಮತಿ ನೀಡಿದ್ದೂ, ಇಬ್ಬರಿಗೂ ವಿಶೇಷ ವಿವಾಹ ಕಾಯ್ದೆಯಡಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದೀಗ ಜೋಡಿಯ ಪ್ರಕರಣ ಸುಖಾಂತ್ಯಗೊಂಡಿದ್ದು, ಮುಂದಿನ ತಿಂಗಳು ಇವರು ಫ್ರಾನ್ಸ್​ಗೆ ತೆರಳಲಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99