ಯುವಕನೊಂದಿಗಿದ್ದ ನಟಿಯ ಖಾಸಗಿ ವೀಡಿಯೋ ಲೀಕ್ : ಲೈವ್ ನಲ್ಲಿ ನೋವು ತೋಡಿಕೊಂಡ ತ್ರಿಷಾ ಕರ್ ಮಧು
Monday, August 16, 2021
ಮುಂಬೈ: ಭೋಜ್‌ಪುರಿ ನಟಿ ತ್ರಿಷಾ ಕರ್ ಮಧು ಅವರು ಯುವಕನೊಂದಿಗಿದ್ದ ಖಾಸಗಿ ವೀಡಿಯೋವೊಂದು ವೈರಲ್ ಆಗಿದ್ದು, ಈ ಬಗ್ಗೆ ಸ್ವತಃ ತ್ರಿಷಾ ಕರ್ ಮಧು ಅವರೇ ಲೈವ್‌ಗೆ ಬಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲೀಕ್ ಆಗಿರುವ ವೀಡಿಯೋದಲ್ಲಿ ತ್ರಿಷಾ ಕರ್ ಮಧು ಜತೆ ಜೊತೆಗೆ ಓರ್ವ ಯುವಕ ಇದ್ದಾನೆ. ಆತ ನಟಿಯ ಬಾಯ್‌ಫ್ರೆಂಡ್ ಎನ್ನಲಾಗಿದ್ದು, ಇದೇ ಕಾರಣಕ್ಕೆ ತ್ರಿಷಾ ಕರ್ ಮಧು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಜೊತೆಗೆ ಪಬ್ಲಿಸಿಟಿಗಾಗಿ ಬೇಕೆಂದೇ ತ್ರಿಷಾ ಕರ್ ಮಧು ಅವರೇ ಈ ಕೆಲಸ ಮಾಡಿರಬಹುದು ಎಂಬ ಆರೋಪವನ್ನು ನೆಟ್ಟಿಗರು ಮಾಡುತ್ತಿದ್ದಾರೆ.
ಈ ಬಗ್ಗೆ ನೊಂದು ಲೈವ್ ಗೆ ಬಂದಿರುವ ನಟಿ ತ್ರಿಷಾ ಕರ್ ಮಧು ನಿಮ್ಮ ಮನೆಯಲ್ಲೂ ಅಕ್ಕ-ತಂಗಿಯರಿದ್ದಾರೆ. ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ನಟಿ ತ್ರಿಷಾ ಕರ್ ಮಧು 'ಹಮ್ ಹೇ ಹಿಂದೂಸ್ತಾನಿ' ಎಂಬ ಭೋಜ್‌ಪುರಿ ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಬಂದಿದ್ದಾರೆ. ಭೋಜ್‌ಪುರಿಯ ಅನೇಕ ಸಿನಿಮಾಗಳ ಐಟಂ ಸಾಂಗ್‌ಗಳಲ್ಲಿ ತ್ರಿಷಾ ಕರ್ ಕಾಣಿಸಿಕೊಂಡಿದ್ದಾರೆ.